ETV Bharat / state

ಕೊಪ್ಪಳದಲ್ಲಿ ಸಿದ್ದು ಸ್ಪರ್ಧೆಗೆ ಕಾಂಗ್ರೆಸ್​​ ಕಾರ್ಯಕರ್ತರ ಒತ್ತಾಯ: ಕೈ ವಶವಾಗುತ್ತಾ ಕಮಲ ಕೋಟೆ!

2009ರಿಂದ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್, ಶತಾಯಗತಾಯ ತನ್ನ ಕೈವಶ ಮಾಡಿಕೊಳ್ಳಲು ತಂತ್ರ ಹೆಣೆಯುತ್ತಿದೆ.

ಕೈ ವಶವಾಗುತ್ತಾ ಕಮಲ ಕೋಟೆ
author img

By

Published : Mar 12, 2019, 11:10 PM IST

ಕೊಪ್ಪಳ: ಚುನಾವಣಾ ದಿನಾಂಕ‌ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿದ್ದು, ಆಕಾಂಕ್ಷಿ ಅಭ್ಯರ್ಥಿಗಳು ಟಿಕೆಟ್​ಗಾಗಿ ಕಸರತ್ತು ಆರಂಭಿಸಿದ್ದಾರೆ.

2009ರಿಂದ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್, ಶತಾಯಗತಾಯ ತನ್ನ ಕೈವಶ ಮಾಡಿಕೊಳ್ಳಲು ತಂತ್ರ ಹೆಣೆಯುತ್ತಿದೆ. ಎದುರಾಳಿ ಅಭ್ಯರ್ಥಿಯನ್ನು ಮಣಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಸೂಕ್ತ ಅಭ್ಯರ್ಥಿಯಾಗಿದ್ದು, ಸಿದ್ದರಾಮಯ್ಯ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಂದ ಬಲವಾದ ಒತ್ತಾಯ ಕೇಳಿಬರುತ್ತಿದೆ.

ಹೌದು, ಒಂದು ಕಾಲದಲ್ಲಿ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಕೊಪ್ಪಳ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಒಂದೊಂದೇ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಬಂದಿದೆ. ಇದಕ್ಕೆ ಕೊಪ್ಪಳ ಲೋಕಸಭಾ ಕ್ಷೇತ್ರವೂ ಹೊರತಾಗಿಲ್ಲ. 2008 ಹಾಗೂ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರ ಕೈ ಬಿಟ್ಟು ಕಮಲದ ತೆಕ್ಕೆಗೆ ಹೋಗಿದೆ. ಹೀಗಾಗಿ, ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ತನ್ನ ವಶ ಮಾಡಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದೆ.

ಈ ಬಾರಿಯ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಯನ್ನು ಮಣಿಸಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಈ ನಡುವೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಈಗ ಬೆಳೆಯುತ್ತಲೇ ಇದೆ. ಪ್ರಮುಖ ಆಕಾಂಕ್ಷಿಗಳಾಗಿರುವ ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕೆ.ಬಸವರಾಜ ಹಿಟ್ನಾಳ್, ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಓಡಾಡುತ್ತಿರುವ ಅವರ ಮಗ ಕೆ.ರಾಜಶೇಖರ ಹಿಟ್ನಾಳ್, ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ ಹಾಗೂ ಶಿವರಾಮಗೌಡ ಸೇರಿದಂತೆ ಅನೇಕರು ಈಗಾಗಲೇ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ.

ಕೈ ವಶವಾಗುತ್ತಾ ಕಮಲ ಕೋಟೆ

ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ ಎಂದು ಹೇಳಿಕೊಂಡು ಬಂದಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸಹ ಟಿಕೆಟ್​ಗಾಗಿ ಸದ್ದಿಲ್ಲದೆ ಪ್ರಯತ್ನ ಮಾಡುತ್ತಿದ್ದಾರಂತೆ. ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಬೇಕು ಎಂಬ ಕೂಗು ಹಾಗೂ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ, 1991ರಲ್ಲಿ ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿ 11197 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸೋತಿರುವ ಕ್ಷೇತ್ರದಲ್ಲಿಯೇ ಮತ್ತೆ ಅವರನ್ನು ಗೆಲ್ಲಿಸಲು ನಾವು ರೆಡಿ ಇದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.
ಇನ್ನು ನಮ್ಮ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಳ ಇದ್ದರೂ ಸಹ ಸಿದ್ದರಾಮಯ್ಯ ಬಂದು ಸ್ಪರ್ಧಿಸಿದರೆ ಬಹಳ ಒಳ್ಳೆಯದು. ಅವರು ಸ್ಪರ್ಧಿಸುವುದಾದರೆ ಕಾಂಗ್ರೆಸ್​ನ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿ ಗೆಲುವಿಗೆ ಶ್ರಮಿಸುತ್ತಾರೆ ಎನ್ನುತ್ತಾರೆ ಮಂಜುನಾಥ ಗೊಂಡಬಾಳ.

ಇನ್ನು ಕ್ಷೇತ್ರದಲ್ಲಿರುವ ಕುರುಬ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮತಗಳು ಸಿದ್ದರಾಮಯ್ಯ ಅವರಿಗೆ ಹೋಗಲಿದ್ದು, ಗೆಲುವಿಗೆ ಸುಲಭವಾಗಲಿದೆ ಎಂಬುದು ಇಲ್ಲಿನ ಕಾರ್ಯಕರ್ತರ ಲೆಕ್ಕಾಚಾರ. ಈಗಾಗಲೇ ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಹಲವಾರು ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ‌. ಆದರೆ, ಕಾರ್ಯಕರ್ತರ ಹಾಗೂ ಹೈಕಮಾಂಡ್ ಒತ್ತಡಕ್ಕೆ‌ ಮಣಿದು ಸ್ಪರ್ಧಿಸಬಹುದು ಎಂಬ ಆಸೆ ಇನ್ನೂ ಕೊಪ್ಪಳದ ಕಾರ್ಯಕರ್ಯರು, ಮುಖಂಡರಲ್ಲಿದೆ‌. ಕಾರ್ಯಕರ್ತರ ಈ ನಿರೀಕ್ಷೆಗೆ ಇನ್ನೊಂದೆರಡು ದಿನದಲ್ಲಿ ಉತ್ತರ ದೊರೆಯಲಿದೆ.

Intro:Body:

Intro:

Body:ಕೊಪ್ಪಳ:- ಲೋಕಸಭಾ ಸಮರದ ಕಾವು ಕೊಪ್ಪಳದ ರಣಬಿಸಿಲಿನಂತೆ ಏರುತ್ತಿದೆ. ಚುನಾವಣಾ ದಿನಾಂಕ‌ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿದ್ದು ಆಕಾಂಕ್ಷಿ ಅಭ್ಯರ್ಥಿಗಳು ಟಿಕೇಟ್ ಗಾಗಿ ಕಸರತ್ತು ಆರಂಭಿಸಿದ್ದಾರೆ. ೨೦೦೯ ರಿಂದ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದುಕೊಂಡಿರುವ ಕಾಂಗ್ರೆಸ್ ಶತಾಯಗತಾಯ ತನ್ನ ಕೈವಶ ಮಾಡಿಕೊಳ್ಳಲು ತಂತ್ರ ಹೆಣೆಯುತ್ತಿದೆ. ಎದುರಾಳಿ ಅಭ್ಯರ್ಥಿಯನ್ನು ಮಣಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಸೂಕ್ತ ಅಭ್ಯರ್ಥಿಯಾಗಿದ್ದು ಸಿದ್ದರಾಮಯ್ಯ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಂದ ಬಲವಾದ ಒತ್ತಾಯ ಕೇಳಿಬರುತ್ತಿದೆ.

ಹೌದು...,  ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕೊಪ್ಪಳ ಜಿಲ್ಲೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಒಂದೊಂದೆ ಕ್ಷೇತ್ರದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಾ ಬಂದಿದೆ. ಇದಕ್ಕೆ ಕೊಪ್ಪಳ ಲೋಕಸಭಾ ಕ್ಷೇತ್ರವೂ ಹೊರತಾಗಿಲ್ಲ. ೨೦೦೯ ಹಾಗೂ ೨೦೧೪ ರಲ್ಲಿ ಬಿಜೆಪಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೈ ಬಿಟ್ಟು ಕಮಲದ ತೆಕ್ಕೆಗೆ ಹೋಗಿದೆ. ಹೀಗಾಗಿ, ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದೆ. ಈ ಬಾರಿಯ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಯನ್ನು ಮಣಿಸಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಈಗ ಬೆಳೆಯುತ್ತಲೆ ಇದೆ. ಪ್ರಮುಖ ಆಕಾಂಕ್ಷಿಗಳಾಗಿರುವ ಕಳೆಷ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದ ಕೆ. ಬಸವರಾಜ ಹಿಟ್ನಾಳ್, ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಓಡಾಡುತ್ತಿರುವ ಅವರ ಮಗ ಕೆ. ರಾಜಶೇಖರ ಹಿಟ್ನಾಳ್, ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ ಹಾಗೂ ಶಿವರಾಮಗೌಡ ಸೇರಿದಂತೆ ಅನೇಕರು ಈಗಾಗಲೇ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮನೆಯ ಬಾಗಿಲು ತಟ್ಟಿದ್ದಾರೆ. ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ ಎಂದು ಹೇಳಿಕೊಂಡು ಬಂದಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸಹ ಟಿಕೇಟ್ ಗಾಗಿ ಸದ್ದಿಲ್ಲದೆ ಪ್ರಯತ್ನ ಮಾಡುತ್ತಿದ್ದಾರಂತೆ. ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಬೇಕು ಎಂಬ ಕೂಗು ಹಾಗೂ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ, ೧೯೯೧ ರಲ್ಲಿ ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿ ೧೧೧೯೭ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸೋತಿರುವ ಕ್ಷೇತ್ರದಲ್ಲಿಯೇ ಮತ್ತೆ ಅವರನ್ನು ಗೆಲ್ಲಿಸಲು ನಾವು ರೆಡಿ ಇದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳ್ತಿದಾರೆ. ಸಿದ್ದರಾಮಯ್ಯ ಅವರು ಇಲ್ಲಿ ಲೋಕಸಭೆಗೆ ಸ್ಪರ್ಧಿಸಬೇಕು ಎಂದು ಈಗಾಗಲೇ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಒತ್ತಾಯಿಸುತ್ತಲೇ ಬಂದಿದ್ದಾರೆ‌. ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ಸಿದ್ದರಾಮಯ್ಯ ಅವರು ಸ್ಪರ್ಧಿಸಬೇಕು. ಅವರು ಸ್ಪರ್ಧಿಸುವುದಾದರೆ ಪಕ್ಷದ ಎಲ್ಲ ಮುಖಂಡರು, ಆಕಾಂಕ್ಷಿಗಳು ಎಲ್ಲರೂ ಒಗ್ಗೂಡಿ ಶ್ರಮಿಸಿ ಸಿದ್ದರಾಮಯ್ಯ ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತ ಮುನೀರ್ ಅಹ್ಮದ್ ಸಿದ್ಧಿಖಿ. ಇನ್ನು ನಮ್ಮ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳು ಬಹಳ ಇದ್ದರೂ ಸಹ ಸಿದ್ದರಾಮಯ್ಯ ಬಂದು ಸ್ಪರ್ಧಿಸಿದರೆ ಬಹಳ ಒಳ್ಳೆಯದು. ಅವರು ಸ್ಪರ್ಧಿಸುವುದಾದರೆ ಕಾಂಗ್ರೆಸ್ ನ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿ ಗೆಲುವಿಗೆ ಶ್ರಮಿಸುತ್ತಾರೆ ಎನ್ನುತ್ತಾರೆ ಮಂಜುನಾಥ ಗೊಂಡಬಾಳ. ಇನ್ನು ಕ್ಷೇತ್ರದಲ್ಲಿರುವ ಕುರುಬ ಸಮುದಾಯದ, ಅಲ್ಪಸಂಖ್ಯಾತ ಸಮುದಾಯದ ಮತಗಳು ಸಿದ್ದರಾಮಯ್ಯ ಅವರಿಗೆ ಹೋಗಲಿದ್ದು ಗೆಲುವಿಗೆ ಈಸಿಯಾಗಲಿ ಎಂಬುದು ಇಲ್ಲಿನ ಕಾರ್ಯಕರ್ತರ ಲೆಕ್ಕಾಚಾರ. ಈಗಾಗಲೇ ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಹಲವಾರು ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ‌. ಆದರೆ, ಕಾರ್ಯಕರ್ತರ ಹಾಗೂ ಹೈಕಮಾಂಡ್ ಒತ್ತಡಕ್ಕೆ‌ ಮಣಿದು ಸ್ಪರ್ಧಿಸಬಹುದು ಎಂದು ಆಸೆ ಇನ್ನೂ ಕೊಪ್ಪಳದ ಕಾರ್ಯಕರ್ಯರು, ಮುಖಂಡರು ಆಸೆ ಇಟ್ಟುಕೊಂಡಿದ್ದಾರೆ‌. ಕಾರ್ಯಕರ್ತರ ಈ ನಿರೀಕ್ಷೆಗೆ ಇನ್ನೊಂದೆರಡು ದಿನದಲ್ಲಿ ಉತ್ತರ ದೊರೆಯಲಿದೆ. 

Conclusion:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.