ಕುಷ್ಟಗಿ/ಕೊಪ್ಪಳ: ಕುಷ್ಟಗಿಯ ಇನ್ನರವ್ಹೀಲ್ ಕ್ಲಬ್ ವಿಶೇಷ ಚೇತನ ವಿದ್ಯಾರ್ಥಿನಿ ಭಾಗ್ಯಶ್ರೀಗೆ 80 ಸಾವಿರ ರೂ. ಮೌಲ್ಯದ ತ್ರಿಚಕ್ರ ವಾಹನ ಕೊಡುಗೆಯಾಗಿ ನೀಡಿದೆ.
ಸ್ಥಳೀಯ ಬಿಸಿಎಂ ಹಾಸ್ಟೆಲ್ನಲ್ಲಿದ್ದು ಬಿ.ಎ. ದ್ವಿತೀಯ ವರ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ಹೋಗಿ ಬರಲು ಅಂಗವೈಕಲ್ಯ ಅಡ್ಡಿಯಾಗಿತ್ತು. ವಿದ್ಯಾರ್ಥಿನಿ ಸಮಸ್ಯೆ ಮನಗಂಡ ಕ್ಲಬ್ ಸದಸ್ಯರು ಹಾಗೂ ದೇಣಿಗೆ ಸಹಾಯದಿಂದ ಸ್ಕೂಟಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ವೇಳೆ ಕ್ಲಬ್ ಅಧ್ಯಕ್ಷೆ ಮೇಘಾ ದೇಸಾಯಿ ಹಾಗೂ ವಂದನಾ ಗೋಗಿ ಇಬ್ಬರು ಬಡ ವಿದ್ಯಾರ್ಥಿಯರಿಗೆ ಟ್ಯಾಬ್ ವಿತರಿಸಿದರು.
ಮಗಳ ಮದುವೆ ಖರ್ಚು ಹೊಂದಿಸಲು ಕಂಗಾಲಾಗಿದ್ದ ಲಕ್ಷ್ಮವ್ವಳಿಗೆ ಎಲ್ಲಾ ಸದಸ್ಯರು ಸೇರಿ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಗೆಜ್ಜೆ, ರೇಷ್ಮೆ ಸೀರೆಯನ್ನು ಕೊಡುಗೆ ನೀಡಿದರು.