ಕುಷ್ಟಗಿ: ಲಾಕ್ಡೌನ್ ಸಂಧರ್ಭದಲ್ಲಿ ದಿನವೂ ಲಾಠಿ ಹಿಡಿದು ಕಾರ್ಯ ನಿರ್ವಹಿಸುವ ಪೊಲೀಸರು, ಹಗಲು ವೇಷಗಾರರ ಸಹಯೋಗದೊಂದಿಗೆ ಬುಧವಾರ ಶೂರ್ಪನಕಿ ಹಾಗೂ ಯಮಧೂತರ ವೇಷದಲ್ಲಿ ಅಣಕು ಪ್ರದರ್ಶನದ ಮೂಲಕ ಕೊರೊನಾ ವೈಸ್ನ ಬಗ್ಗೆ ಜಾಗೃತಿ ಮೂಡಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರಿಗೆ ತಲೆ ನೋವಾಗಿರುವ ಅನಗತ್ಯವಾಗಿ ಹಾಗೂ ಮಾಸ್ಕ್ ಇಲ್ಲದೇ ಸಂಚರಿಸುವವರನ್ನು ತಡೆದು ನಿಲ್ಲಿಸಿ, ನಾನು ಕೊರೊನಾ ಮಹಾಮಾರಿ, ಮನೆಯಲ್ಲಿ ಇರಿ. ಇನ್ನೊಮ್ಮೆ ರಸ್ತೆಗೆ ಬಂದರೆ ಯಮಲೋಕಕ್ಕೆ ಕರೆದೊಯ್ಯುವುದಾಗಿ ಎಚ್ಚರಿಸಿದರಲ್ಲದೇ ಹಲಗೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಬೈಕ್ ಸವಾರರ ಸುತ್ತ ಕುಣಿದು ಬೈಕ್ ಸವಾರರನ್ನು ಆ ಕ್ಷಣ ತಬ್ಬಿಬ್ಬುಗೊಳಿಸಿದರು.
ಇನ್ನು ಸಿಪಿಐ ಚಂದ್ರಶೇಖರ್. ಜಿ ಹಾಗೂ ಪಿಎಸೈ ಚಿತ್ತರಂಜನ್ ನಾಯಕ್ ನೇತೃತ್ವದಲ್ಲಿ ಕುಷ್ಟಗಿ ಪೊಲೀಸರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಸಂದೇಶದೊಂದಿಗೆ ಈ ಪ್ರಯೋಗ ವಿಭಿನ್ನವೆನಿಸಿತು.