ಗಂಗಾವತಿ: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಸರ್ಕಾರದಲ್ಲಿ ವಿಸ್ತರಣೆಯಾಗಲಿರುವ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಅದರಲ್ಲೂ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿಸ್ಥಾನ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಒತ್ತಾಯ ಮಾಡಲಾಗಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅನ್ಯ ಜಿಲ್ಲೆಯ ಸಚಿವರನ್ನು ಇಲ್ಲಿನ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗುತಿದೆ. ಇದು ನಮ್ಮ ಜಿಲ್ಲೆಯ ಪಕ್ಷದ ಸಂಘಟನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕಾರ್ಯಕರ್ತರ ಭಾವನೆಗೆ ಧಕ್ಕೆಯಾಗುತ್ತಿದೆ.
ಮುಖ್ಯವಾಗಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅನ್ಯ ಜಿಲ್ಲೆಯ ಮಂತ್ರಿಗಳಿಗೆ ಆಸಕ್ತಿ ಅಷ್ಟಕಷ್ಟೆ ಎಂಬುವುದು ಇದುವರೆಗೂ ಮನಗಾಣಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮೂರು ಜನ ಶಾಸಕರಿದ್ದು, ರಾಜಕೀಯ ಹಿರಿತನ, ಪಕ್ಷ ಸಂಘಟನೆಯಂತ ಮಾನದಂಡ ಅನುರಿಸಿ ಗಂಗಾವತಿಗೆ ಮಂತ್ರಿ ಸ್ಥಾನ ನೀಡುವಂತೆ ಕೋರಲಾಗಿದೆ ಎಂದು ಪರಣ್ಣ ಹೇಳಿದರು.
ಇದನ್ನು ಓದಿ: ಶಾಸಕರಾದ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತೆ, ನನಗೂ ಇದೆ : ವೈಎ ನಾರಾಯಣಸ್ವಾಮಿ