ಕೊಪ್ಪಳ: ಹೋಳಿ ಹುಣ್ಣಿಮೆ ಹಬ್ಬ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ವಿಶೇಷತೆಯಿಂದ ಕೂಡಿದ್ದು, ಈ ಭಾಗದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಭಾನುವಾರ ಕಾಮದಹನ ಮಾಡಲಾಯಿತು.
ಯಲಬುರ್ಗಾ ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ಹಿನ್ನೆಲೆ ರತಿ ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಜನರು ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಪಟ್ಟಣದಲ್ಲಿ ಪುರುಷರು, ಹೆಣ್ಣುಮಕ್ಕಳು ವಿವಿಧ ವೇಷಭೂಷಣ ಧರಿಸಿ, ಕಾಮನ ಮುಂದೆ ಕುಳಿತು ಅಳುತ್ತಿರುವಂತೆ ನಟಿಸಿ, ಮನರಂಜನೆ ನೀಡಿದರು. ಬಳಿಕ ರಾತ್ರಿ ಜಿಲ್ಲೆಯ ವಿವಿಧೆಡೆ ಕಾಮದಹನ ನಡೆಯಿತು.