ಗಂಗಾವತಿ(ಕೊಪ್ಪಳ): ಹಿಂದೂಪರ ಸಂಘಟನೆಯ ನಾನಾ ಪ್ರಮುಖ ಸಂಘಟನೆಗಳಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿರುವ ಮುಖಂಡರ ನೇತೃತ್ವದಲ್ಲಿಯೇ ಅಂಜನಾದ್ರಿಯಲ್ಲಿ ಹನುಮ ಜಯಂತಿ ಆಚರಿಸಲಾಗಿದೆ.
ಕೊರೊನಾ ಸಾಂಕ್ರಾಮಿಕ ವಿಪತ್ತು ನಿರ್ವಹಣೆ, ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ವನ್ಯಪ್ರಾಣಿಗಳ ನಿರಂತರ ದಾಳಿಯಿಂದಾಗಿ ಮುಂಜಾಗ್ರತಾ ಕ್ರಮವಹಿಸಿ ಜಿಲ್ಲಾಧಿಕಾರಿ, ಹನುಮ ಜಯಂತಿಯಂದು ಅಂಜನಾದ್ರಿ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿ ಆದೇಶದ ಬೆನ್ನಿಗೆ ದೇಗುಲದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ರೇಣುಕಾ ಕೂಡ ಅಂಜನಾದ್ರಿಗೆ ಸಾರ್ವಜನಿಕರ ಮುಖ್ಯವಾಗಿ ಹನುಮ ಮಾಲಾಧಾರಿಗಳ ಪ್ರವೇಶಕ್ಕೆ ತಡೆ ನೀಡಿದ್ದರು. ಆದರೆ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ಪ್ರಮುಖರಾದ ಸೂರ್ಯನಾರಾಯಣ ಕಾಮತ್, ವಿನಯ್ ಪಾಟೀಲ್, ಪುಂಡಲೀಕ, ದೊಡ್ಡಯ್ಯ ಸ್ವಾಮಿ, ನರಸಿಂಹ ಮೂರ್ತಿ, ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಹಸ್ರಾರು ಭಕ್ತರು ಹಾಗೂ ಹನುಮ ವ್ರತಾಧಾರಿಗಳು ಅಂಜನಾದ್ರಿಗೆ ಭೇಟಿ ನೀಡಿದರು.
ಇದೀಗ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ನಿರ್ಬಂಧದ ಆದೇಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುವಂತೆ ಮಾಡಿದೆ.