ಗಂಗಾವತಿ: ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಾದ ಕಾರಟಗಿ ತಾಲ್ಲೂಕಿನ ಬೆನ್ನೂರು ಗ್ರಾಮ ಪಂಚಾಯಿತಿ 9ನೇ ವಾರ್ಡ್ನಿಂದ ಮಂಗಳಮುಖಿ ಜಮುನಾ ಅಖಾಡಕ್ಕೆ ಇಳಿದಿದ್ದಾರೆ.
ಸಹದ್ಯೋಗಿ ಜಮುನಾ ಪರವಾಗಿ ಮಂಗಳಮುಖಿಯರ ಸಮೂಹ ಪ್ರಚಾರಕ್ಕಿಳಿದಿದ್ದು, ತಾಲೂಕಿನ ಗಮನ ಸೆಳೆದಿದೆ. ಗಂಗಾವತಿ, ಕಾರಟಗಿ, ಸೇರಿದಂತೆ ನಾನಾ ಭಾಗದಲ್ಲಿರುವ ಮಂಗಳಮುಖಿಯರು ಆಗಮಿಸಿ ಪ್ರಚಾರ ಮಾಡುತ್ತಿದ್ದಾರೆ. ಮಂಗಳಮುಖಿಯರ ಗುಂಪು, ಮತದಾರರ ಮನೆಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ, ಕುಂಕುಮ ನೀಡಿ ಜಮುನಾಗೆ ಮತ ನೀಡುವಂತೆ ಮಹಿಳೆಯರ ಮನವೊಲಿಸುವಲ್ಲಿ ನಿರತವಾಗಿದೆ.
ಓದಿ: ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಂಗಳಮುಖಿ
ಮಂಗಳಮುಖಿ ಜುಮುನಾ ಸ್ಪರ್ಧಿಸಿರುವ ಕ್ಷೇತ್ರಕ್ಕೆ ಇನ್ನಿಬ್ಬರು ಮಹಿಳೆಯರು ಸ್ಪರ್ಧಿಸಿದ್ದಾರೆ.