ETV Bharat / state

ಕೊಪ್ಪಳ ಜಿಲ್ಲೆಯಲ್ಲಿ ಜೋರು ಮಳೆ: ಕೆಲವೆಡೆ ರಸ್ತೆ ಸಂಪರ್ಕ ಕಡಿತ, ಜನಜೀವನ ಅಸ್ತವ್ಯಸ್ಥ - rain water rushed into houses

ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಕುವೆಂಪು ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಶೇಖರಿಸಿಡಲಾಗಿದ್ದ ಧವಸ ಧಾನ್ಯ ನೀರು ಪಾಲಾಗಿದೆ. ರಾತ್ರಿ ಪೂರ್ತಿ ಸುರಿದ ವರ್ಷಧಾರೆಗೆ ಗುಂಡೂರು-ಲಕ್ಷ್ಮೀ ಕ್ಯಾಂಪ್ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಲಕ್ಷ್ಮೀ ಕ್ಯಾಂಪ್ ಮತ್ತು ಗುಂಡೂರಿನ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕೊಪ್ಪಳ ಜಿಲ್ಲೆಯಾದ್ಯಂತ ಭಾರಿ ಮಳೆ: ಅವಾಂತರ ಸೃಷ್ಟಿಸಿದ ವರುಣ
author img

By

Published : Sep 26, 2019, 1:08 PM IST

ಕೊಪ್ಪಳ: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ಕೊಪ್ಪಳದ ಕುವೆಂಪು ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನಕ್ಕೆ ತೊಂದರೆಯಾಗಿದೆ.

ಕೊಪ್ಪಳ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.

ಮನೆಯೊಳಗೆ ಮಳೆ ನೀರು ನುಗ್ಗಿದ ಹಿನ್ನಲೆ ಕೂಡಿಟ್ಟಿದ್ದ ಧವಸ ಧಾನ್ಯ ನೀರು ಪಾಲಾಗಿದೆ. ಮನೆಯಲ್ಲಿ ಕುಳಿತುಕೊಳ್ಳಲು, ನಿಲ್ಲಲೂ ಜಾಗವಿಲ್ಲದೆ ಇಡೀ ರಾತ್ರಿ ನಿವಾಸಿಗಳು ಜಾಗರಣೆ ಮಾಡುವಂತ ಪರಿಸ್ಥಿತಿ ಎದುರಾಗಿದೆ. ನೀರನ್ನು ಮನೆಯಿಂದ ಹೊರ ಹಾಕಲು ಜನ ಹರಸಾಹಸ ಪಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ರಾತ್ರಿ ಪೂರ್ತಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜೊತೆಗೆ ಗುಂಡೂರು-ಲಕ್ಷ್ಮೀ ಕ್ಯಾಂಪ್ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಲಕ್ಷ್ಮೀ ಕ್ಯಾಂಪ್ ಮತ್ತು ಗುಂಡೂರಿನ ನಡುವಿನ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಕುಷ್ಟಗಿ ತಾಲೂಕಿನ ಕಂದಕೂರು ನಾಗರಾಳ ಮಧ್ಯದಲ್ಲಿರುವ ಹಳ್ಳ ಭೋರ್ಗರೆಯುತ್ತಿದ್ದು ಅಲ್ಲಿಯೂ ಕೂಡ ಸಂಪರ್ಕ ಕಡಿತಗೊಂಡಿದೆ.

Intro:Body:ಕೊಪ್ಪಳ:- ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸಿದ್ದಾನೆ. ರಾತ್ರಿ ವ್ಯಾಪಕವಾಗಿ ಮಳೆ‌ ನುಗ್ಗಿದ್ದು ಕೆಲವೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೊಪ್ಪಳದ ಕುವೆಂಪು ನಗರದಲ್ಲಿ ಸುಮಾರು 40 ಕ್ಕು ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಮನೆಗಳಲ್ಲಿದ್ದ ದವಸ ಧಾನ್ಯಗಳು ಹಾಳಾಗಿವೆ. ಮನೆಗಳಿಂದ ನೀರು ಹೊರಹಾಕಲು ಜನರು ಹರಸಾಹಸ ಮಾಡಿದರು. ಇನ್ನು ಇಡಿರಾತ್ರಿ ಧಾರಕಾರವಾಗಿ ಸುರಿದ ಮಳೆಗೆ ಜಿಲ್ಲೆಯ ಹಲವು ಭಾಗದ ಹಳ್ಳಕೊಳ್ಳಲು ತುಂಬಿ ಹರಿಯುತ್ತಿವೆ. ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಹಳ್ಳ ಸೇರಿದಂತೆ ಅನೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಗುಂಡೂರು-ಲಕ್ಷ್ಮೀ ಕ್ಯಾಂಪ್ ಬ್ರೀಡ್ಜ್ ಮೇಲೆ ನೀರು ಹರಿದಿದೆ. ಹೀಗಾಗಿ, ಲಕ್ಷ್ಮೀ ಕ್ಯಾಂಪ್ - ಗುಂಡೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ತುಂಬಿದ ಹಳ್ಳ ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ‌. ಇನ್ನು ಕುಷ್ಟಗಿ ತಾಲೂಕಿನ ಕಂದಕೂರು ನಾಗರಾಳ ಮಧ್ಯದಲ್ಲಿರುವ ಹಳ್ಳ ಭೋರ್ಗರೆಯುತ್ತಿದೆ. ಇಲ್ಲಿಯೂ ಸಹ ಸಂಪರ್ಕ ಕಡಿತಗೊಂಡಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.