ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು ವ್ಯಾಪಕ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ನಾಡಿನ ಮೂಲೆ ಮೂಲೆಗಳಿಂದ ಬರುತ್ತಿದ್ದು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋ ಬಸ್ತ್ ಕೈಗೊಂಡಿದೆ. ಜಾತ್ರೆಯ ಭದ್ರತೆಗಾಗಿ 3 ಡಿವೈಎಸ್ಪಿಗಳು , 13 ಜನ ಸಿಪಿಐಗಳು, ಮೂವತ್ತು ಜನ ಪಿಎಸ್ಐ, 50 ಎಎಸ್ಐಗಳು, 400 ಜನ ಪೇದೆಗಳು, 52 ಮಹಿಳಾ ಪೇದೆಗಳು, 663 ಜನ ಹೋಂಗಾರ್ಡ್, 8 ಡಿಎಆರ್ ತುಕಡಿ ಹಾಗೂ ಎರಡು ಕೆಎಸ್ಆರ್ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ, ಕಳ್ಳತನ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ.