ETV Bharat / state

ಗಂಗಾವತಿ ನಗರದಲ್ಲಿ ಮಿತಿಮೀರಿದ ಶ್ವಾನಗಳ ಹಾವಳಿ; ವಾಹನ ಸವಾರರಿಗೆ ಪೀಕಲಾಟ

ಗಂಗಾವತಿ ನಗರದಲ್ಲಿ ಎಲ್ಲಿ ನೋಡಿದರೂ ಬರೀ ಶ್ವಾನಗಳದ್ದೆ ಹಾವಳಿ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಾಹನ ಸವಾರರಿಗೆ ನಾಯಿಗಳು ದುಃಸ್ವಪ್ನವಾಗಿ ಕಾಡುತ್ತಿವೆ.

ಗಂಗಾವತಿ ನಗರದಲ್ಲಿ ಶ್ವಾನನಗಳ ಹಾವಳಿ
author img

By

Published : Sep 15, 2019, 3:39 PM IST

ಗಂಗಾವತಿ: ನಗರದಲ್ಲಿ ಎಲ್ಲಿ ನೋಡಿದರೂ ಬರಿ ಶ್ವಾನಗಳದ್ದೆ ಕಾರುಬಾರು ಎನ್ನುವಂತಾಗಿದೆ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಾಹನ ಸವಾರರಿಗೆ ಈ ನಾಯಿಗಳು ತಲೆನೋವಾಗಿ ಪರಿಣಮಿಸಿವೆ. ಶ್ವಾನಗಳ ಹಿಂಡು ಯಾವಾಗ ವಾಹನಗಳಿಗೆ ಅಡ್ಡಬಂದು ಅಪಘಾತದ ಸಂಭವಿಸುತ್ತದೋ ಎಂಬ ಭೀತಿ ಸವಾರರನ್ನು ಕಾಡುತ್ತಿದೆ.

ನಗರದ ತುಂಬೆಲ್ಲಾ ಶ್ವಾನನಗಳದ್ದೆ ಹಾವಳಿ..ಇದು ಗಂಗಾವತಿ ನಾಯಿಗಳ ಕತೆ

ನಗರದಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಶ್ವಾನ ಸಂತತಿ ಹೆಚ್ಚಳವಾಗಿದೆ. ದ್ವಿಚಕ್ರ ವಾಹನ ಸವಾರರಿಗಂತೂ ನಾಯಿಗಳು ಯಮ ಸ್ವರೂಪಿಯಾಗಿ ಕಾಡುತ್ತಿವೆ.

ಮೂತ್ರ ಮಾಡುವ ಮೂಲಕ ತಮ್ಮ ಪ್ರದೇಶದ ಗಡಿಯನ್ನು ಗುರುತಿಸಿಕೊಳ್ಳುವ ಶ್ವಾನಗಳು, ಮತ್ತೊಂದು ನಾಯಿಯೊಂದಿಗೆ ಜಗಳ ಕಾಯುವಾಗಲೇ, ರಸ್ತೆ ಬದಿಯಲ್ಲಿ ಆಹಾರಕ್ಕೋ ಕಚ್ಚಾಟ ಆರಂಭಿಸುತ್ತವೆ. ಇದರಿಂದಾಗಿಯೂ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.

ಶ್ವಾನಗಳ ನಿಯಂತ್ರಣಕ್ಕೆ ನಗರಸಭೆ 'ಆಪರೇಷನ್ ಡಾಗ್' ಯೋಜನೆಯನ್ನು 2017ರಲ್ಲಿ ಜಾರಿಗೆ ತಂದಿತ್ತು. ನಾಯಿ ಹಿಡಿಯುವವರನ್ನು ಕರೆತಂದು ಕಾರ್ಯಚರಣೆ ಮಾಡಿಸಲಾಗಿತ್ತು.

ಗದಗ ಮೂಲದ ಸಂಸ್ಥೆಯೊಂದು ಗುತ್ತಿಗೆ ಪಡೆದು ಒಂದೊಂದು ನಾಯಿಗೂ 180 ರೂಪಾಯಿ ಎಂದು ನಿಗದಿ ಪಡಿಸಿತ್ತು. ಹೀಗೆ ಹಿಡಿದ ನಾಯಿಯನ್ನು ದೂರದ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟು ಬರಬೇಕು ಎಂದು ಷರತ್ತು ವಿಧಿಸಲಾಗಿತ್ತು. ಆದರೆ ನಾಯಿ ಹಿಡಿದಿದ್ದಕ್ಕಿಂತಲೂ ಹೆಚ್ಚಿನ ಮೊತ್ತದ ಬಿಲ್ ಪಡೆಯಲಾಯಿತು ಎಂಬ ದೂರುಗಳು ಕೇಳಿ ಬಂದಿದ್ದವು.

ಹಿಡಿದ ನಾಯಿಗಳನ್ನು ಸಾಯಿಸುವುದು, ದೂರ ಪ್ರದೇಶಕ್ಕೆ ಬಿಟ್ಟು ಬರುವುದು, ಅನ್ನಾಹಾರವಿಲ್ಲದೆ ಅವುಗಳನ್ನು ಸಾಯಿಸುವ ಬದಲಿಗೆ, ಅರಿವಳಿಕೆ ನೀಡಿ ಸಂತಾನ ಹರಣ ಚಿಕಿತ್ಸೆ ನೀಡಿದರೆ ಸಾಕು ನಾಯಿಗಳ ಸಂಖ್ಯೆ ನಿಯಂತ್ರಣವಾಗುತ್ತದೆ ಎನ್ನುತ್ತಾರೆ ಪ್ರಾಣಿಪ್ರಿಯ ಶರ್ಮಸ್ತ್ ಅಲಿ.

Intro:ನಗಗರದಲ್ಲಿ ಎಲ್ಲಿ ನೋಡಿದರೂ ಬರಿ ಶ್ವಾನಗಳದ್ದೆ ಹಾವಳಿ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಾಹನ ಸವಾರರಿಗೆ ದುಃಸ್ವಪ್ನವಗಿ ಕಾಡುತ್ತಿರುವ ಶ್ವಾನಗಳು ಹಿಂಡು ಯಾವಾಗ ವಾಹನಗಳಿಗೆ ಅಡ್ಡಬರುತ್ತವೋ ಎಂದು ಭೀತಿಯಲ್ಲಿ ವಾಹನ ಚಲಾಯಿಸಬೇಕಾದ ಸ್ಥಿತಿ ಎದುರಾಗಿದೆ.
Body:ವಿಶೇಷ ವರದಿ

ನಗರದ ತುಂಬೆಲ್ಲಾ ಶ್ವಾನನಗಳದ್ದೆ ಹಾವಳಿ
ಗಂಗಾವತಿ:
ನಗಗರದಲ್ಲಿ ಎಲ್ಲಿ ನೋಡಿದರೂ ಬರಿ ಶ್ವಾನಗಳದ್ದೆ ಹಾವಳಿ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಾಹನ ಸವಾರರಿಗೆ ದುಃಸ್ವಪ್ನವಗಿ ಕಾಡುತ್ತಿರುವ ಶ್ವಾನಗಳು ಹಿಂಡು ಯಾವಾಗ ವಾಹನಗಳಿಗೆ ಅಡ್ಡಬರುತ್ತವೋ ಎಂದು ಭೀತಿಯಲ್ಲಿ ವಾಹನ ಚಲಾಯಿಸಬೇಕಾದ ಸ್ಥಿತಿ ಎದುರಾಗಿದೆ.
ನಗರದಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಶ್ವಾನ ಸಂತತಿ ಹೆಚ್ಚಳವಾಗಿದೆ. ಅವುಗಳ ಸಂಖ್ಯೆ ಹೆಚ್ಚಳದಿಂದಾಗಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗಂತೂ ನಾಯಿಗಳು ಯಮನ ಸ್ವರೂಪಿಯಾಗಿ ಕಾಡುತ್ತಿವೆ.
ಮೂತ್ರ ಮಾಡುವ ಮೂಲಕ ಶ್ವಾನಗಳು ತಮ್ಮ ಪ್ರದೇಶದ ಗಡಿಯನ್ನು ಗುರುತಿಸಿಕೊಳ್ಳುತ್ತವೆ. ಹೀಗೆ ಮಾಡುವಾಗ ಮತ್ತೊಂದು ನಾಯಿಯೊಂದಿಗೆ ಜಗಳ ಕಾಯುವಾಗಲೊ, ರಸ್ತೆ ಬದಿಯಲ್ಲಿ ಆಹಾರಕ್ಕೋ ಕಚ್ಚಾಟ ಆರಂಭವಾಗಿ ಅದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ನಗರದಲ್ಲಿನ ಶ್ವಾನಗಳ ಸಂಖ್ಯೆ ಹೆಚ್ಚಳವಾದಾಗ ನಿಯಂತ್ರಣಕ್ಕೆ ನಗರಸಭೆ ಆಪರೇಷನ್ ಡಾಗ್ ಎಂಬ ಯೋಜನೆಯನ್ನು 2017ರಲ್ಲಿ ಜಾರಿ ಮಾಡಿತ್ತು. ನಾಯಿ ಹಿಡಿಯುವವರನ್ನು ಕರೆತಂದು ಕಾರ್ಯಚರಣೆ ಮಾಡಿಸಲಾಗಿತ್ತು.
ಗದಗ ಮೂಲದ ಸಂಸ್ಥೆಯೊಂದು ಗುತ್ತಿಗೆ ಪಡೆದು ಒಂದೊಂದು ನಾಯಿಗೂ 180 ರೂಪಾಯಿ ಎಂದು ನಿಗದಿ ಪಡಿಸಲಾಗಿತ್ತು. ಹಿಡಿದ ನಾಯಿಯನ್ನು ದೂರದ ಪ್ರದೇಶಕ್ಕೆ ಒಯಯ್ದು ಬಿಟ್ಟು ಬರಬೇಕು ಎಂದು ಷರತ್ತು ವಿಧಿಸಲಾಗಿತ್ತು.
ಆದರೆ ನಾಯಿ ಹಿಡಿದಿದ್ದಕ್ಕಿಂತಲೂ ಹೆಚ್ಚಿನ ಮೊತ್ತದ ಬಿಲ್ ಎತ್ತುವಳಿ ನಡೆಯಿತು ಎಂಬ ದೂರು ಕೇಳಿ ಬಂದಿದ್ದವು. ಮತ್ತೀಗ ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ.
ಶ್ವಾನ ಸಂಖ್ಯೆ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಳ್ಳಬೇಕಿದೆ.
'ಹಿಡಿದ ನಾಯಿಗಳನ್ನು ಸಾಯಿಸುವುದು, ದೂರ ಪ್ರದೇಶಕ್ಕೆ ಬಿಟ್ಟು ಬರುವುದು, ಅನ್ನಾಹಾರವಿಲ್ಲದೆ ಅವುಗಳನ್ನು ಸಾಯಿಸುವ ಬದಲಿಗೆ, ಅರವಳಿಕೆ ನೀಡಿ ಸಂತಾನ ಹರಣ ಚಿಕಿತ್ಸೆ ನೀಡಿದರೆ ಸಾಕು ನಾಯಿಗಳ ಸಂಖ್ಯೆ ನಿಯಂತ್ರಣವಾಗುತ್ತದೆ ಎನ್ನುತ್ತಾರೆ' ಪ್ರಾಣಿಪ್ರಿಯ ಶರ್ಮಸ್ತ್ ಅಲಿ.

Conclusion:'ಹಿಡಿದ ನಾಯಿಗಳನ್ನು ಸಾಯಿಸುವುದು, ದೂರ ಪ್ರದೇಶಕ್ಕೆ ಬಿಟ್ಟು ಬರುವುದು, ಅನ್ನಾಹಾರವಿಲ್ಲದೆ ಅವುಗಳನ್ನು ಸಾಯಿಸುವ ಬದಲಿಗೆ, ಅರವಳಿಕೆ ನೀಡಿ ಸಂತಾನ ಹರಣ ಚಿಕಿತ್ಸೆ ನೀಡಿದರೆ ಸಾಕು ನಾಯಿಗಳ ಸಂಖ್ಯೆ ನಿಯಂತ್ರಣವಾಗುತ್ತದೆ ಎನ್ನುತ್ತಾರೆ' ಪ್ರಾಣಿಪ್ರಿಯ ಶರ್ಮಸ್ತ್ ಅಲಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.