ETV Bharat / state

ಕಾಂಗ್ರೆಸ್, ಬಿಜೆಪಿ ರೈತ ವಿರೋಧಿಗಳು: ಹೆಚ್.ಡಿ.ಕುಮಾರಸ್ವಾಮಿ - ಬಜರಂಗದಳ ಬ್ಯಾನ್

ರೈತ ವಿರೋಧಿಗಳು ಯಾರು ಎಂಬುದನ್ನು ಮೇ 10 ರಂದು ಜನರು ತೀರ್ಮಾನಿಸಲಿದ್ದಾರೆ ಎಂದು ಹೆಚ್​ಡಿಕೆ ಹೇಳಿದರು.

HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
author img

By

Published : May 3, 2023, 12:20 PM IST

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ

ಕೊಪ್ಪಳ: ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ರೈತ ವಿರೋಧಿಗಳಾಗಿವೆ. ರೈತರಿಗೆ ಬೇಕಾದ ವಿದ್ಯುಚ್ಛಕ್ತಿ, ನೀರು ಕೊಡುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರ ಏನು ಮಾಡಿವೆ?. ಜೆಡಿಎಸ್ ರೈತರಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ, ಕಾಂಗ್ರೆಸ್ ಹೇಳುತ್ತಿವೆ. ನಾನು ಈ ರಾಜ್ಯದ ಸಿಎಂ ಆಗಿ ರೈತರ ಸಾಲ ಮನ್ನಾ ಮಾಡಿದ್ದು ಅನ್ಯಾಯವೇ? ರೈತ ವಿರೋಧಿಗಳು ಯಾರು ಎಂಬುದನ್ನು ಮೇ 10 ರಂದು ಜನರು ತೀರ್ಮಾನಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಕೊಪ್ಪಳದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಯೂರಿಯಾ, "ಡಿಎಪಿ ಬೆಲೆ ಏರಿಕೆ ಮಾಡಿ ರೈತರ ಹೊಟ್ಟೆ ಮೇಲೆ ಹೊಡೆದು ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 2,000 ರೂ ಕೊಡುವುದರಿಂದ ಏನಾಗುತ್ತದೆ?. ಉತ್ತರ ಕರ್ನಾಟಕದಲ್ಲಿ ಹತ್ತು ಹಲವು ಜ್ವಲಂತ ಸಮಸ್ಯೆಗಳು ಇನ್ನೂ ಇವೆ. ಕರ್ನಾಟಕದ 10 ಜಿಲ್ಲೆಗಳಲ್ಲಿ ಇನ್ನೂ ಬಡತನವಿದೆ ಎಂದು ಕೇಂದ್ರ ಸರ್ಕಾರವೇ ವರದಿ ನೀಡಿದೆ. ಈ ವರದಿ ಆಧರಿಸಿ ಈ ಭಾಗಕ್ಕೆ ಸರ್ಕಾರ ಕೊಟ್ಟಂತಹ ಕಾರ್ಯಕ್ರಮಗಳೇನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕಿದೆ" ಎಂದರು.

ಕೃಷ್ಣಾ ನ್ಯಾಯಾಧೀಕರಣ ತೀರ್ಪು: ಕಳೆದ 10 ವರ್ಷಗಳ ಹಿಂದೆಯೇ ಕೃಷ್ಣಾ ನ್ಯಾಯಾಧೀಕರಣ ತೀರ್ಪು ಬಂದಿದೆ. ಈ 10 ವರ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮಾಡಿದ್ದೇನು?. ಒಂದು ಡಬಲ್ ಇಂಜಿನ್ ಸರ್ಕಾರ, ಕಾಂಗ್ರೆಸ್​ನದ್ದು ಯಾವ ಸರ್ಕಾರ ಗೊತ್ತಿಲ್ಲ. ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರಲ್ಲಿ ಕರ್ನಾಟಕದ ಬಗ್ಗೆ ಈಗಿನ ಆತ್ಮೀಯತೆ ಹಿಂದೆ ಕಾಣಲಿಲ್ಲ. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗಳ ಮೂಲಕ ಜನರಿಗೆ ಕೈ ಬೀಸಿ ಹೋಗುವುದರಿಂದ ಜನರ ಸಮಸ್ಯೆ ಗಮನ ಸೆಳೆಯಲು ಸಾಧ್ಯನಾ?. ಈ ಎಲ್ಲ ಕಾರಣಗಳಿಂದಾಗಿ ಮೋದಿ ಚಾರ್ಮ್, ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ಹೇಳಿದರು.

'ಜಲಜೀವನ್' ದುಡ್ಡು ಮಾಡುವ ಯೋಜನೆ: ರಾಜ್ಯದಲ್ಲಿ ಜಲಜೀವನ್ ಯೋಜನೆಯಲ್ಲಿ ಹಣ ಹರಿದಿದೆಯೇ ಹೊರತು ಯಾವ ನಲ್ಲಿಯಲ್ಲೂ ನೀರು ಹರಿದಿಲ್ಲ. ಯೋಜನೆಯಲ್ಲಿ ಗುತ್ತಿಗೆದಾರರೊಂದಿಗೆ ಸಂಬಂಧಿಸಿದ ಮಂತ್ರಿಗಳು ಸಂಪದ್ಭರಿತರಾಗಿದ್ದಾರೆ. ಮನೆ ಮನೆಗೆ ಗಂಗೆ ಬರಲಿದ್ದಾಳೆಂದು ಜನರ ದುಡ್ಡಲ್ಲಿ ಗುತ್ತಿಗೆದಾರರು, ಮಂತ್ರಿಗಳು ಮಜಾ ಮಾಡಿದ್ದಾರೆ. ಇವೆಲ್ಲವನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಬಜರಂಗದಳ ಬ್ಯಾನ್ ಬೇಕಿತ್ತಾ?: ರಾಜ್ಯದಲ್ಲಿರುವ ಸಂಘಟನೆಗಳನ್ನು ಬ್ಯಾನ್ ಮಾಡುವುದರಿಂದ ಯಾವ ಪರಿಹಾರವೂ ಸಿಗುವುದಿಲ್ಲ. ಸಂಘಟನೆಗಳು ಮಾಡಿರುವ ತಪ್ಪು, ಆ ತಪ್ಪು ಮಾಡಲು ಚಿತಾವಣೆ ಮಾಡಿದವರನ್ನು ಕಂಡು ಹಿಡಿಯಬೇಕು. ಅವರಿಗೆ ಕಾನೂನಾತ್ಮಕ ಶಿಕ್ಷೆಯಾಗಬೇಕು. ಬಜರಂಗ ದಳದಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿದ್ದಾರೆ. ಭಾವನಾತ್ಮಕ ವಿಚಾರವನ್ನು ಅವರ ತಲೆಗೆ ತುಂಬಲಾಗುತ್ತದೆ. ಅವರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ‌. ಇದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಅಷ್ಟಕ್ಕೂ ಬಜರಂಗದಳ ಬ್ಯಾನ್ ಮಾಡುವ ವಿಚಾರ ಪ್ರಣಾಳಿಕೆಯಲ್ಲಿ ಹೇಳುವ ವಿಷಯವೇ? ಎಂದು ಹೆಚ್​ಡಿಕೆ ಹರಿಹಾಯ್ದರು.

ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ: ಭ್ರಷ್ಟಾಚಾರ ಎಲ್ಲ ರಾಜಕೀಯ ನಾಯಕರಿಗೂ ಗೊತ್ತು. ಪಕ್ಕದ ರಾಯಚೂರು ಜಿಲ್ಲೆಯ ಶಾಸಕರೊಬ್ಬರು ಒಂದೂ ಆಶ್ರಯ ಮನೆ ಕಟ್ಟದೆ ಬಿಲ್ ಎತ್ತುವಳಿ ಮಾಡಿದ್ದಾರೆ. ಇಂತಹ ಸಾಕಷ್ಟು ಉದಾಹರಣೆಗಳಿವೆ. ಜನರು ತೆರಿಗೆ ರೂಪದಲ್ಲಿ ಸರ್ಕಾರ ಖಜಾನೆ ತುಂಬಿಸುತ್ತಿದ್ದಾರೆ. ಆದರೆ ಅದು ವಾಪಸ್ ಬಡವರಿಗೆ ಹೋಗುತ್ತಿಲ್ಲ. ರಾಜಕಾರಣಿಗಳ ಜೇಬಿಗೆ ಬಂದು ಬೀಳುತ್ತದೆ. ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದರು.

ಬಿಜೆಪಿಗೆ ಮೋದಿ ಮುಖ ಬಿಟ್ಟು ಬೇರೆ ಗತಿ ಇಲ್ಲ: ಬಿಜೆಪಿಯವರಿಗೆ ರಾಜ್ಯದಲ್ಲಿ ಮತ ಕೇಳಲು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಅದಕ್ಕೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮುಖ ಬಿಟ್ಟರೆ ಬೇರೆ ಗತಿ ಇಲ್ಲ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮುಖ ನೋಡಿ ವೋಟ್ ಹಾಕಿ ಅಂತ ಅವರು ಯಾಕೆ ಕೇಳುತ್ತಿಲ್ಲ?. ಇಲ್ಲಿರುವುದೆಲ್ಲ ನಡೆಯದ ನಾಣ್ಯಗಳು. ಹಾಗಾಗಿ ಲೋಕಸಭೆಯಿಂದ ಗ್ರಾಮ ಪಂಚಾಯತಿವರೆಗೂ ನಡೆಯುವ ಪ್ರತಿ ಚುನಾವಣೆಗೆ ಮೋದಿ ಮುಖ ನೋಡಿ ಮತ ನೀಡಿ ಎಂದು ಅಂಗಲಾಚುತ್ತಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಈ ಬಾರಿಯ ಚುನಾವಣೆಯಲ್ಲಿ ನಮಗೆ ಸಮರ್ಥ ಅಭ್ಯರ್ಥಿಗಳು ಸಿಕ್ಕಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ 30 ರಿಂದ 35 ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ದೇವೇಗೌಡರ ಕಾಲದಲ್ಲಿ ಜನತಾ ದಳದಲ್ಲಿ ಘಟನಾಘಟಿ ನಾಯಕರಿದ್ದರು. ಆದರೆ ಈಗ ಆ ಕಾಲವಿಲ್ಲ. ಪಕ್ಷದಲ್ಲಿ ನಾಯಕತ್ವ ಹಾಗೂ ಸಂಘಟನೆಯ ಕೊರತೆ ಇದೆ. ನಾನು ರಾಜಕಾರಣಕ್ಕೂ ಬರುವ ಮೊದಲು ಜನತಾ ಪರಿವಾರದ ನಾಯಕರು ಬೇರೆ ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂದರು.

ಇದನ್ನೂ ಓದಿ: ಈಗ ಬಿಟ್ಟರೆ, ಕೇಂದ್ರದ ನಾಯಕರು ಮತ್ತೆ ಬರೋದು ಲೋಕಸಭಾ ಚುನಾವಣೆ ಪ್ರಚಾರಕ್ಕೆ: ಹೆಚ್​ ಡಿ ಕುಮಾರಸ್ವಾಮಿ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.