ಕೊಪ್ಪಳ: ಲಾಕ್ಡೌನ್ನಿಂದಾಗಿ ಹಣ್ಣು, ತರಕಾರಿ ಬೆಲೆ ಗಗನಕ್ಕೇರಿದೆ. ಆದರೆ, ಅವುಗಳನ್ನು ಬೆಳೆದ ರೈತರಿಗೆ ಮಾತ್ರ ಸರಿಯಾಗಿ ಬೆಲೆ ಸಿಗುತ್ತಿಲ್ಲ ಅನ್ನೋದು ಅಷ್ಟೇ ಸತ್ಯ. ಹೀಗಾಗಿ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ಕೆಲ ರೈತರು ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಅದಕ್ಕೆ ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮ ಸಾಕ್ಷಿಯಾಗಿದೆ. ಈ ಗ್ರಾಮವೊಂದರಲ್ಲೇ ನೂರಾರು ಎಕರೆಯಲ್ಲಿ ಎಲೆಕೋಸು ಬೆಳೆಯಲಾಗಿದೆ.
ಒಂದು ಎಲೆಕೋಸು ಬೆಳೆಯಲು ಸುಮಾರು 4-5 ರೂಪಾಯಿ ಖರ್ಚಾಗುತ್ತದೆ. ಆದರೆ, ಈಗ ಪ್ರತಿ ಎಲೆಕೋಸು ಗೆಡ್ಡೆಗೆ ಖರೀದಿದಾರರು ಕೇವಲ ಎರಡು ರೂಪಾಯಿಗೆ ಕೇಳುತ್ತಿದ್ದಾರೆ ಎನ್ನುತ್ತಾರೆ ಚಿಲವಾಡಗಿ ಗ್ರಾಮದ ರೈತ ಸುರೇಶ.
ಬೆಳೆದಿರುವ ಎಲೆಕೋಸು ಕಟಾವು ಮಾಡಿ ಜಾನುವಾರುಗಳಿಗೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಏನೇ ಸಮಸ್ಯೆ ಎದುರಾದರೂ ಅದರ ಮೊದಲ ಪರಿಣಾಮ ಬೀರುವುದು ರೈತರಿಗೆ ಅನ್ನೋದು ಮಾತ್ರ ವಿಪರ್ಯಾಸ.