ETV Bharat / state

ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ವ್ರತ ಪೂರ್ಣಗೊಳಿಸಿದ ಹನುಮ ಮಾಲಾಧಾರಿಗಳು

ಹನುಮ ಮಾಲಾಧಾರಿಗಳ ವ್ರತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಮಾಲೆ ವಿಸರ್ಜಿಸಿದರು.

Anjanadri Hill at Koppal
Anjanadri Hill at Koppal
author img

By

Published : Dec 9, 2019, 1:44 PM IST

ಕೊಪ್ಪಳ: ಹನುಮ ಮಾಲಧಾರಿಗಳ ವ್ರತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಮಾಲೆ ವಿಸರ್ಜಿಸಿದರು.

ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ವ್ರತ ಪೂರ್ಣಗೊಳಿಸಿದ ಹನುಮ ಮಾಲಾಧಾರಿಗಳು

ಇಂದು ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು, ಅಲಂಕಾರ ಹಾಗೂ ಪವಮಾನ ಹೋಮ ನಡೆದವು. ಅಂಜನಾದ್ರಿ ಬೆಟ್ಟಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹನುಮ ಮಾಲಾಧಾರಿಗಳು ಹಾಗೂ ಭಕ್ತರು ಮಾಲೆ ವಿಸರ್ಜಿಸುವ ಮೂಲಕ ತಮ್ಮ ವ್ರತವನ್ನು ಪೂರ್ಣಗೊಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯ ಮಾಲಾಧಾರಿಗಳು ಆಗಮಿಸಿದ್ದರು.

ಚಿಕ್ಕೋಡಿ ಭಾಗವೊಂದರಿಂದಲೇ ಸುಮಾರು 8 ಸಾವಿರದಷ್ಟು ಹನುಮ ಮಾಲಾಧಾರಿಗಳು ಆಗಮಿಸಿದ್ದು, ಅಂಜನಾದ್ರಿ ಬೆಟ್ಟದಲ್ಲಿ ಎಲ್ಲಿ ನೋಡಿದರೂ ಕೇಸರಿ ಉಡುಗೆ ತೊಟ್ಟ ಮಾಲಾಧಾರಿಗಳೇ ಕಾಣುತ್ತಿದ್ದರು. ಜೈ ಭಜರಂಗಿ ಎಂಬ ಭಕ್ತಿಯ ಘೋಷಣೆಗಳು ಬೆಟ್ಟದಲ್ಲಿ ಪ್ರತಿಧ್ವನಿಸಿದವು. ಬೆಟ್ಟಕ್ಕೆ ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆ ಸಹ ಮಾಡಲಾಗಿತ್ತು.

Intro:

Body:ಕೊಪ್ಪಳ:- ಹನುಮಾನ ಮಾಲಾಧರಿಸಿ ವೃತ ಕೈಗೊಂಡಿದ್ದ ಹನುಮ ಮಾಲಾಧಾರಿಗಳು ಇಂದು ಪೌರಾಣಿಕ ಹಿನ್ನೆಲೆಯ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ ಪರ್ವತಕ್ಕೆ ಆಗಮಿಸಿ ಮಾಲೆ ವಿಸರ್ಜಿಸಿದರು. ಆಂಜನೇಯ ಸ್ವಾಮಿ ಜನಿಸಿದ ಅಂಜನಾದ್ರಿ ಪರ್ವತಕ್ಕೆ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಬೃಹತ್ ಸಂಖ್ಯೆಯ ಹನುಮ ಮಾಲಾಧಾರಿಗಳು ಹಾಗೂ ಭಕ್ತರು ಮಾಲೆಯನ್ನು ವಿಸರ್ಜಿಸುವ ಮೂಲಕ ತಮ್ಮ ವೃತವನ್ನು ಪೂರ್ಣಗೊಳಿಸಿದರು. ಇಂದು ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು, ಅಲಂಕಾರ ಹಾಗೂ ಪವಮಾನ ಹೋಮ ನಡೆಯಿತು. ಸುಮಾರು 500 ಕ್ಕೂ ಹೆಚ್ಚು ಇರುವ ಮೆಟ್ಟುಲುಗಳನ್ನು ಹತ್ತಿಬಂದು ಭಕ್ತರು ಸ್ವಾಮಿಯ ದರ್ಶನ ಪಡೆದುಕೊಂಡರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತಿಹೆಚ್ಚು ಸಂಖ್ಯೆಯ ಮಾಲಾಧಾರಿಗಳು ಆಗಮಿಸಿದ್ದರು. ಚಿಕ್ಕೋಡಿ ಭಾಗವೊಂದರಿಂದಲೇ ಸುಮಾರು 8 ಸಾವಿರದಷ್ಟು ಹನುಮಮಾಲಾಧಾರಿಗಳು ಆಗಮಿಸಿದ್ದರು. ಅಂಜನಾದ್ರಿ ಬೆಟ್ಟದಲ್ಲಿ ಎಲ್ಲಿ ನೋಡಿದರೂ ಕೇಸರಿ ಉಡುಗೆ ತೊಟ್ಟ ಮಾಲಾಧಾರಿಗಳೇ ಕಾಣುತ್ತಿದ್ದರು. ಜೈ ಭಜರಂಗಿ ಎಂಬ ಭಕ್ತಿಯ ಘೋಷಣೆಗಳು ಬೆಟ್ಟದಲ್ಲಿ ಪ್ರತಿಧ್ವನಿಸಿದವು. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅಂಜನಾದ್ರಿ ಪರ್ವತಕ್ಕೆ ಬಂದರೆ ಏನೋ ಒಂದು ರೀತಿಯ ಮನಸಿಗೆ ಸಮಾಧಾನ ನೀಡುತ್ತದೆ ಎಂದು ಭಕ್ತರು ಹೇಳಿದರು. ಸಹಸ್ರಾರು ಸಂಖ್ಯೆಯಲ್ಲಿ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ಬೈಟ್1:- ಶಿವಶಂಕರ, ಹನುಮಮಾಲಾಧಾರಿ
ಬೈಟ್2:-ಬಸವಪ್ರಭು ಜೊಲ್ಲೆ, ಚಿಕ್ಕೋಡಿಯಿಂದ ಬಂದಿದ್ದ ಭಕ್ತ. (ಚಾಳೀಸು ಹಾಕಿಕೊಂಡಿದ್ದಾರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.