ETV Bharat / state

ಹನುಮ ಜಯಂತಿ: ಗಂಗಾವತಿ - ಹುಲಗಿ ಕಳಪೆ ರಸ್ತೆ ಕಾಮಗಾರಿ

ಹನುಮ ಜಯಂತಿ ಹಿನ್ನೆಲೆ ಇಲ್ಲಿನ ಗಂಗಾವತಿ-ಹುಲಗಿ ರಸ್ತೆ ದುರಸ್ತಿ ಕಾಮಗಾರಿ ನಡೆದಿತ್ತು. ಆದರೆ, ರಸ್ತೆ ದುರಸ್ತಿ ಮಾಡಿದ 24 ಗಂಟೆಗಳಲ್ಲಿಯೇ ಡಾಂಬರ್​ ಕಿತ್ತು ಬಂದಿದ್ದು ಕಳಪೆ ರಸ್ತೆ ಕಾಮಗಾರಿ ನಡೆಸಿರುವ ಆರೋಪ ಕೇಳಿಬಂದಿದೆ.

hanuma-jayanthi-at-anjanadri-poor-road-work-at-gangavathi-hulagi-road
ಹನುಮ ಜಯಂತಿ : ಗಂಗಾವತಿ-ಹುಲಗಿ ಕಳಪೆ ರಸ್ತೆ ಕಾಮಗಾರಿ
author img

By

Published : Dec 1, 2022, 7:41 PM IST

ಗಂಗಾವತಿ : ಹನುಮ ಜಯಂತಿ ಅಂಗವಾಗಿ ತಾಲೂಕಿನ ಅಂಜನಾದ್ರಿಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ಗಂಗಾವತಿ - ಹುಲಗಿ ರಸ್ತೆ ದುರಸ್ತಿ ಕಾರ್ಯ ನಡೆದಿತ್ತು. ಆದರೆ ರಸ್ತೆ ದುರಸ್ತಿ ಮಾಡಿದ ಕೇವಲ 24 ಗಂಟೆಗಳಲ್ಲಿಯೇ ಡಾಂಬರ್​ ಕಿತ್ತು ಬಂದಿದ್ದು, ಕಳಪೆ ರಸ್ತೆ ಕಾಮಗಾರಿ ನಡೆಸಿರುವ ಆರೋಪ ಕೇಳಿಬಂದಿದೆ.

ಡಿ.5ರಂದು ನಡೆಯಲಿರುವ ಹನುಮ ಜಯಂತಿ ಹಿನ್ನಲೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ಸಂಗಾಪುರದಿಂದ ಅಂಜನಾದ್ರಿ ಬೆಟ್ಟದವರೆಗೆ ಇರುವ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಇದ್ದುದರಿಂದ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಗಿತ್ತು.

ಆದರೆ, ಕಾಮಗಾರಿ ನಡೆಸಿದ 24 ಗಂಟೆಯಲ್ಲಿಯೇ ಡಾಂಬರ್​ ಕಿತ್ತು ಬಂದಿದ್ದು, ಮತ್ತೆ ಗುಂಡಿಗಳು ನಿರ್ಮಾಣವಾಗಿವೆ. ಅಲ್ಲದೇ ರಸ್ತೆಯ ತುಂಬಾ ಹರಳು, ಬೆಂಚಿಕಲ್ಲು ಹರಡಿದ್ದು ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿದೆ.

ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಕೆಲ ಕಿಡಿಗೇಡಿಗಳು : ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಅಂಜನಾದ್ರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಗಂಗಾವತಿ - ಹೊಸಪೇಟೆ ಮಧ್ಯೆ ರಸ್ತೆ ಸಂಪರ್ಕ ಕಲ್ಪಿಸುವ ಕಡೇಬಾಗಿಲು ಸೇತುವೆ ಮೇಲೆ ಕೆಲ ಯುವಕರು ಧ್ವಜ ಹಿಡಿದು ಗಾಳಿಯಲ್ಲಿ ತೇಲಿಸುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ.

ಹನುಮ ಮಾಲಾಧಾರಿಗಳಿಂದ ಪಾದಯಾತ್ರೆ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರ ಗ್ರಾಮದಿಂದ ಅಂಜನಾದ್ರಿಗೆ 100ಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಹನಮಸಾಗರದಿಂದ 100 ಕಿಲೋಮೀಟರ್ ದೂರದಲ್ಲಿ ಇರುವ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಸಂಚರಿಸಿ ಡಿ. 04, 05 ರಂದು ನಡೆಯುವ ಹನುಮ ಜಯಂತಿಯಂದು ಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ : ಹನುಮ ಜಯಂತಿ : ಭಕ್ತರಿಗೆ ಯಾವುದೇ ಕೊರತೆಯಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.