ಕುಷ್ಟಗಿ (ಕೊಪ್ಪಳ): ತಾಲೂಕಿನಲ್ಲಿ ಭರಣಿ ಮಳೆ ಅಲ್ಲಲ್ಲಿ ಆರಂಭಗೊಂಡಿದ್ದು, ಇಷ್ಟು ದಿನ ಬಿಸಿಲಿನಿಂದ ಕಾದ ಕೆಂಡದಂತಾಗಿದ್ದ ಕುಷ್ಟಗಿ ಸದ್ಯ ತಣ್ಣಗಾಗಿದೆ.
ನಗರದ ಪುರ್ತಗೇರಾ, ಕಾಟಾಪುರ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಬಿದ್ದಿದೆ. ಕೊರೊನಾ ಭೀತಿಯ ನಡುವೆಯೂ ಬಿತ್ತನೆ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.
ಬೆಳಗಿನ ಜಾವ ಆರಂಭವಾಗಿದ್ದ ಮಳೆ ಗಂಟೆಗೂ ಅಧಿಕ ಹೊತ್ತು ಹದವಾಗಿ ಸುರಿಯಿತು. ಈ ಮಳೆಯಿಂದ ರೈತನ ಮೊಗದಲ್ಲಿ ಸಂತಸ ಕಂಡು ಬಂದಿದ್ದು, ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬಿತ್ತನೆ ಬೀಜದ ಕುರಿತು ಮಾಹಿತಿ ಪಡೆಯುತ್ತಿರುವುದು ಕಂಡು ಬಂತು.