ETV Bharat / state

ಆಹಾರದ ಕಿಟ್​ ವಿತರಿಸದೆ ಗ್ರಾ.ಪಂ ನಿರ್ಲಕ್ಷ್ಯ: ಕೊಳೆಯುವ ಸ್ಥಿತಿಯಲ್ಲಿ 100 ಕಿಟ್​​

ತಾಲೂಕಿನ ಅಂಟರಠಾಣಾ ಗ್ರಾಮ ಪಂಚಾಯಿತಿಯು ಬಡವರಿಗೆ ವಿತರಿಸಬೇಕಾಗಿದ್ದ ಆಹಾರ ಕಿಟ್​​ಗಳನ್ನು ವಿತರಿಸದೆ ನಿರ್ಲಕ್ಷ್ಯ ತೋರಿದ್ದು, ಇದೀಗ 100ಕ್ಕೂ ಹೆಚ್ಚು ಕಿಟ್​ಗಳು ಹುಳುಗಳ ಪಾಲಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ ಗ್ರಾನೈಟ್ ಮಾಲೀಕರ ಸಂಘ ಲಾಕ್​ಡೌನ್​ ವೇಳೆ 117 ಆಹಾರದ ಕಿಟ್​​​ಗಳನ್ನು ನೀಡಿದ್ದು, ಅಗತ್ಯವಿರುವ ಫಲಾನುಭವಿಗಳಿಗೆ ವಿತರಿಸುವಂತೆ ಸೂಚಿಸಲಾಗಿತ್ತು.

Gram panchayat neglected to delivering food kit for poor In Koppal
ಆಹಾರದ ಕಿಟ್​ ವಿತರಿಸದೆ ಗ್ರಾ.ಪಂ ನಿರ್ಲಕ್ಷ್ಯ: ಕೊಳೆಯುವ ಸ್ಥಿತಿ ತಲುಪಿದ 100 ಕಿಟ್​​
author img

By

Published : Jun 10, 2020, 6:55 PM IST

ಕುಷ್ಟಗಿ(ಕೊಪ್ಪಳ): ಲಾಕಡೌನ್ ಜಾರಿಯಾದ ಬಳಿಕ ಬಡ ಜನರಿಗೆ ಹಸಿವಿನ ಸಮಸ್ಯೆ ನೀಗಿಸಲು ಕುಷ್ಟಗಿ ಗ್ರಾನೈಟ್ ಮಾಲೀಕರ ಸಂಘ ನೀಡಿದ ಅಹಾರ ಸಾಮಗ್ರಿ ಕಿಟ್​ಗಳನ್ನು ತಾಲೂಕಿನ ಅಂಟರಠಾಣಾ ಗ್ರಾಮ ಪಂಚಾಯಿತಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಪತ್ತೆಯಾಗಿದೆ.

ಆಹಾರದ ಕಿಟ್​ ವಿತರಿಸದೆ ಗ್ರಾ.ಪಂ ನಿರ್ಲಕ್ಷ್ಯ: ಕೊಳೆಯುವ ಸ್ಥಿತಿಯಲ್ಲಿ 100 ಕಿಟ್​​

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ದಾನಿಗಳಾದ ಗ್ರಾನೈಟ್ ಮಾಲೀಕರು ಅಹಾರ ಕಿಟ್​ಗಳನ್ನು ತಮ್ಮ ಸಂಘದ ಮೂಲಕ ತಾಲೂಕಾಡಳಿತಕ್ಕೆ ನೀಡಿದ್ದರು. ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅಂಟರಠಾಣಾ ಗ್ರಾಮ ಪಂಚಾಯಿತಿಗೆ ವಿತರಿಸಿ 2 ತಿಂಗಳ ಕಳೆದರೂ 117 ಅಹಾರದ ಕಿಟ್​​​​​​​ಗಳ ಪೈಕಿ 17 ಮಾತ್ರ ವಿತರಿಸಿ, ಉಳಿದ 100 ಕಿಟ್​​ಗಳು ಬಡ ವರ್ಗದವರಿಗೆ ಹಂಚಿಕೆ ಮಾಡದೇ ನಿರ್ಲಕ್ಷಿಸಿದೆ.

ಈ ಅಹಾರ ಸಾಮಗ್ರಿ ಕಿಟ್​ಗಳಿಗೆ ಇರುವೆ ಮುತ್ತಿಕೊಂಡು ಹಾಳಾಗುತ್ತಿದ್ದರೂ, ಸಂಬಂಧಿಸಿದ ಪಿಡಿಒ ವೆಂಕಟೇಶ ವಂದಾಲ ಕ್ರಮಕ್ಕೆ ಮುಂದಾಗಿಲ್ಲ ಎಂದು ಕಾಟಾಪೂರ ಗ್ರಾಮದ ಶಂಕರ ಕರಪಡಿ, ಯರಿಗೋನಾಳ ಗ್ರಾಮದ ಶರಣಗೌಡ ಪಾಟೀಲ ಆರೋಪಿಸಿದ್ದಾರೆ.

ಈ ಕುರಿತು ವಿಚಾರಿಸಿದರೆ ಗ್ರಾಮ ಪಂಚಾಯಿತಿಯವರು ಫಲಾನುಭವಿಗಳ ಪಟ್ಟಿ ನೀಡದೇ ಇರುವುದರಿಂದ ಕಿಟ್​ಗಳನ್ನು ಹಂಚಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಪಿಡಿಒ ವೆಂಕಟೇಶ ವಂದಾಲ ಹೇಳುತ್ತಿದ್ದಾರೆ ಎಂದು ಕಾಟಾಪೂರ ಗ್ರಾಮದ ಶಂಕರ ಕರಪಡಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.