ಗಂಗಾವತಿ: ಕೊರೊನಾ ಹರಡುವಿಕೆ ಭೀತಿಯಿಂದ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದಾಗಿನಿಂದ ಇಲ್ಲಿವರೆಗೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ನಿಜವಾದ ವಾರಿಯರ್ಗಳನ್ನು ಸರ್ಕಾರ, ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳು ಗುರುತಿಸಿಲ್ಲ ಎಂದು ಸಿಲಿಂಡರ್ ಡೆಲಿವರಿ ಮಾಡುವವರು ಅಸಮಾಧಾನ ಹೊರ ಹಾಕಿದ್ದಾರೆ.
ಲಾಕ್ಡೌನ್ ಬಳಿಕ ಎಲ್ಲರೂ ಮನೆಯಲ್ಲಿದ್ದು ಅಡುಗೆ ಮಾಡಿಕೊಂಡು ಹೊಟ್ಟೆ ತುಂಬ ಊಟ ಮಾಡಲು ನೆರವಾದ ಈ ಸಿಲಿಂಡರ್ ಡೆಲಿವರಿ ಬಾಬ್ಗಳನ್ನು ಮಾತ್ರ ಇದುವರೆಗೂ ಯಾರೂ ಕೂಡ ವಾರಿಯರ್ಸ್ ರೂಪದಲ್ಲಿ ಗುರುತಿಸದಿರುವುದು ಆ ವಲಯದಲ್ಲಿನ ಕೆಲಸಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕ್ವಾರಂಟೈನ್ನಲ್ಲಿರುವ ಪಾಸಿಟಿವ್, ನೆಗೆಟಿವ್ ಹೀಗೆ ಎಲ್ಲರ ಮನೆಗಳವರೆಗೂ ಹೋಗಿ ಸಿಲಿಂಡರ್ ವಿತರಿಸುವ ಅಚ್ಚುಕಟ್ಟಾದ ಸೇವೆಯನ್ನು ಈ ಡೆಲಿವರಿ ಬಾಯ್ಸ್ ಮಾಡಿದ್ದಾರೆ. ಆದರೆ ಯಾರೊಬ್ಬರೂ ತಮ್ಮ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸದಿರುವುದು ನೋವು ಉಂಟು ಮಾಡಿದೆ ಎಂದು ಡೆಲಿವರಿ ಬಾಯ್ಸ್ ಅಳಲು ತೋಡಿಕೊಂಡಿದ್ದಾರೆ.