ಕೊಪ್ಪಳ: ಆನೆಗುಂದಿ ಬಳಿಯ ಅಂಜನಾದ್ರಿಯಲ್ಲಿ ನಡೆಯಲಿರುವ ಶಿಲಾಪೂಜೆಯಲ್ಲಿ ಭಾಗವಹಿಸಲು ರಾಜ್ಯಪಾಲ ವಜುಭಾಯಿ ವಾಲಾ ಜಿಲ್ಲೆಗೆ ಆಗಮಿಸಿದ್ದಾರೆ.
ಆನೆಗುಂದಿ ಬಳಿ ಇರುವ ಹೆಲಿಪ್ಯಾಡ್‍ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಂದಿಳಿದಿದ್ದು, ಇಲ್ಲಿಂದ ರಸ್ತೆ ಮಾರ್ಗವಾಗಿ ಅಂಜನಾದ್ರಿಗೆ ತೆರಳಿದ್ದಾರೆ. ಶಿಲಾಪೂಜೆಗೆ ಆಗಮಿಸಿದ ವಜುಭಾಯಿ ವಾಲಾರನ್ನು ಆನೆಗುಂದಿಯ ಹೆಲಿಪ್ಯಾಡ್‍ನಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ ಹಾಗೂ ಅಧಿಕಾರಿಗಳು ಸ್ವಾಗತಿಸಿದರು.
ಅಂಜನಾದ್ರಿಯಲ್ಲಿ ಸುಮಾರು ಒಂದು ಗಂಟೆ ಕಾಲ ನಡೆಯಲಿರುವ ಶಿಲಾಪೂಜೆಯಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ.