ಗಂಗಾವತಿ: ಇಲ್ಲಿನ ಕಿಲ್ಲಾ ಏರಿಯಾಲದಲ್ಲಿದ್ದ ಮೌಲ್ವಿ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢವಾದ ಬೆನ್ನಲ್ಲೇ ಇದೀಗ ಇಲ್ಲಿನ ಉಪ ವಿಭಾಗ ಸರ್ಕಾರಿ ಆಸ್ಪತ್ರೆಗೆ ಗಂಟಲು ದ್ರವ ಪರೀಕ್ಷೆಗೆಂದು ಬರುವವರ ಸಂಖ್ಯೆ ಹೆಚ್ಚಾಗಿದೆ.
ಹೀಗೆ ಪರೀಕ್ಷೆಗೆಂದು ಬರುತ್ತಿರುವವರಲ್ಲಿ ಮುಖ್ಯವಾಗಿ ಮೌಲ್ವಿ ಜೊತೆ ಸೇರಿ ಮಸೀದಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಿದ್ದವರು ಎನ್ನಲಾಗಿದೆ. ಕೆಲವರು ಸ್ವಯಂ ಪ್ರೇರಣೆಯಿಂದ ಆಗಮಿಸಿ ಗಂಟಲು ದ್ರವ ಪರೀಕ್ಷೆಗೆ ಒಳಗಾದ್ರೆ, ಇನ್ನು ಕೆಲವರು ಸಮುದಾಯದ ಮುಖಂಡರ ಸೂಚನೆ ಮೇರೆಗೆ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.