ಗಂಗಾವತಿ(ಕೊಪ್ಪಳ): ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಗರಸಭೆಯ ವಿವಾದಾತ್ಮಕ ಕಟ್ಟಡ ನಿರ್ಮಾಣವಾಗಿತ್ತು. ಇದೀಗ ಉದ್ಘಾಟನೆಯಾಗಿ ಕೇವಲ ಎರಡೇ ವಾರಕ್ಕೆ ನಿಜ ಬಣ್ಣ ಬಯಲಾಗಿದೆ. ಮಳೆ ಬಂದಾಗಲೆಲ್ಲ ಕಟ್ಟಡ ಸೋರುತ್ತಿದೆ. ಕಳೆದ ಮೂರು ವರ್ಷದಿಂದ ಕಟ್ಟಡದ ಕಾಮಗಾರಿ ಕುಂಟುತ್ತಲೇ ಸಾಗಿ ನವೆಂಬರ್ 28ರಂದು ಕೊನೆಗೂ ಉದ್ಘಾಟನೆಯ ಭಾಗ್ಯ ಕಂಡಿತ್ತು.
ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ನೂತನ ಕಟ್ಟಡವನ್ನು ಉದ್ಘಾಟಿಸಿದ್ದರು. ನಗರಸಭೆಯ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ವಿರೋಧದ ಮಧ್ಯೆಯೂ ಕಟ್ಟಡ ಲೋಕಾರ್ಪಣೆ ನಡೆದಿತ್ತು. ಇದೀಗ ನಗರಸಭೆಯ ಮೊದಲ ಮಹಡಿಯಲ್ಲಿರುವ ಪ್ರವೇಶದ್ವಾರದ ಮೇಲ್ಭಾಗದಲ್ಲಿ ಸೋರಿಕೆ ಕಂಡುಬಂದಿದೆ.
ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ನೀರಾವರಿ ಇಲಾಖೆ: ಸೋರುತ್ತಿದ್ದ ಶತಮಾನದ ಕಟ್ಟಡಕ್ಕೆ ಪುನರುಜ್ಜೀವ