ಗಂಗಾವತಿ: ಭತ್ತದ ನಗರಿ ಗಂಗಾವತಿಗೆ ರೈಲ್ವೆ ಸೇವೆ ಬೇಕೆಂಬ ಕಾರಣಕ್ಕೆ ಇಲ್ಲಿನ ಜನರು ನಡೆಸಿದ ದಶಕಗಳ ಹೋರಾಟದ ಫಲವಾಗಿ ರೈಲ್ವೆ ಸೇವೆಯೇನೋ ಬಂತು. ಆದರೆ, ಈ ಸೇವೆ ಬಂದು ಕೇವಲ ಮೂರು ವರ್ಷದಲ್ಲೇ ಜನರಿಗೆ ನಿರಾಸೆ ಉಂಟಾಗಿದೆ.
ಇದನ್ನೂ ಓದಿ: ಬೆಂಗಳೂರು ಗುಣಮಟ್ಟದ ಜೀವನ ನಡೆಸಲು ನಂಬರ್ 1 ಸಿಟಿ
2019ರ ಮಾರ್ಚ್ 4 ರಂದು ಗಂಗಾವತಿಯಲ್ಲಿ ರೈಲು ಸೇವೆ ಲೋಕಾರ್ಪಣೆಯಾಗಿತ್ತು. ಮೂರು ವರ್ಷ ಕಳೆಯುವುದರೊಳಗೆ ನಿಲ್ದಾಣ ದುಸ್ಥಿತಿಗೆ ತಲುಪಿದೆ.
ನಿಲ್ದಾಣದಲ್ಲಿ ಸ್ವಚ್ಛತೆಯ ಕೊರತೆ, ನಿರ್ವಹಣೆಯ ಸಮಸ್ಯೆಯಿಂದ ಪ್ರಯಾಣಿಕರು ನಿಲ್ದಾಣದೊಳಗೆ ಕಾಲಿಡಲು ಹಿಂದುಮುಂದು ನೋಡುವ ಪರಿಸ್ಥಿತಿ ಉದ್ಭವಿಸಿದೆ. ಉದ್ಘಾಟನೆಗೊಂಡ ನಾಮಫಲಕ ಜನ ಮೂತ್ರ ಮಾಡುವ ಸ್ಥಳ ತಲುಪಿದೆ.
ರೈಲ್ವೆ ಸೇವೆಯಿಂದ ಗಂಗಾವತಿ ಜನರಿಗೆ ತುಂಬಾ ಅನುಕೂಲವಾಗಿತ್ತು. ಇಂದು ಕೇವಲ 150 ರೂಪಾಯಿಯಲ್ಲಿ ಹುಬ್ಬಳ್ಳಿಗೆ ಹೋಗಿ ಬರಲು ಸಾಧ್ಯವಾಗಿದೆ. ಆದರೆ ಜನರು ಇತರೆ ಭಾಗಕ್ಕೆ ರೈಲ್ವೆ ಸೇವೆಯ ಬೇಡಿಕೆ ಇಟ್ಟಿರುವ ಸಂದರ್ಭದಲ್ಲಿ ನಿಲ್ದಾಣದಲ್ಲಿನ ಅವ್ಯವಸ್ಥೆ ಬೇಸರ ಹುಟ್ಟಿಸುತ್ತಿದೆ ಎಂದು ವಕೀಲ ಎಚ್.ಎಂ.ಮಂಜುನಾಥ ಹೇಳುತ್ತಾರೆ.