ಕೊಪ್ಪಳ: ಜನನಿಬಿಡ ಪ್ರದೇಶದಲ್ಲಿ ಜನ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಸ್ವತಃ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಾಚರಣೆಗೆ ಇಳಿದಿದ್ದರು.
ನಗರದ ಮಹಾತ್ಮ ಗಾಂಧಿ ಹಾಗೂ ಮಹಾವವೀರ ವೃತ್ತದಲ್ಲಿ ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಹಲವರು ಅಡ್ಡಿಪಡಿಸುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ, ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಫುಟ್ಪಾತ್ ಆಕ್ರಮಿಸಿಕೊಂಡ ಕೆಲ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಕೆಲ ಗೂಡಂಗಡಿಗಳನ್ನು ತೆರವು ಮಾಡುವಂತೆ ಡಿವೈಎಸ್ಪಿ, ಸಂಚಾರಿ ಪಿಎಸ್ಐ ನಾಗರಾಜ್ ಸೂಚಿಸಿದ್ದಾರೆ. ಸಹಕಾರ ನೀಡದ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.