ಕೊಪ್ಪಳ: ಭಾರೀ ಮಳೆಯಿಂದ ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದ ಹಳ್ಳ ತುಂಬಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿರುವ ಘಟನೆ ಶನಿವಾರ ನಡೆದಿದೆ.
ಸಂಕನೂರು ಗ್ರಾಮದ ಭುವನೇಶ್ವರಿ ಪೊಲೀಸ್ ಪಾಟೀಲ್ (40), ಗಿರಿಜವ್ವ ಕಲ್ಲನಗೌಡ ಮಾಲಿ ಪಾಟೀಲ್(32), ವೀಣಾ ಮಾಲಿಪಾಟೀಲ್ (19) ಹಾಗೂ ಪವಿತ್ರ ಸಿದ್ದಯ್ಯ ಪೊಲೀಸ್ ಪಾಟೀಲ್ (40) ಕೊಚ್ಚಿಹೋಗಿರುವ ಮಹಿಳೆಯರು.
ಹತ್ತಿ ಜಿನ್ನಿಂಗ್ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದ್ದ ಮಹಿಳೆಯರು ಮರಳಿ ಮನೆಗೆ ಬರುವಾಗ ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಹಳ್ಳದಲ್ಲಿ ಕೊಚ್ಚಿ ಹೋದ ಇಬ್ಬರು ಪೊಲೀಸರು, ಒಬ್ಬರ ಮೃತದೇಹ ಪತ್ತೆ..
ಮೂರು ಮೃತದೇಹ ಪತ್ತೆ: ಇಂದು ಮೂರು ಮೃತದೇಹಗಳು ಪತ್ತೆಯಾಗಿವೆ. ಗಿರಿಜವ್ವ, ಭುವನೇಶ್ವರಿ, ವೀಣಾ ಮಾಲಿಪಾಟೀಲ್ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದ ಪವಿತ್ರಾ ಪೊಲೀಸ್ ಪಾಟೀಲ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿ ಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಶೋಧಕಾರ್ಯ ನಡೆದಿದೆ.