ETV Bharat / state

ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ಕಾರ್​ನಲ್ಲೇ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಮಾಜಿ ಸಚಿವ

ಗಂಗಾವತಿಗೆ ಹೊರಟಿದ್ದ ದಂಪತಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಇದನ್ನು ಕಂಡ ಮಾಜಿ ಸಚಿವ ಶಿವರಾಜ ತಂಗಡಗಿ ತಮ್ಮ ಕಾರ್​​ನಲ್ಲಿಯೇ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

former-minister-shivaraj-tangadigi-of-hospitalization-of-the-injured-in-the-accident
ತಮ್ಮ ಕಾರ್​ನಲ್ಲಿಯೆ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಮಾಜಿ ಸಚಿವ
author img

By

Published : Jun 13, 2021, 11:15 AM IST

ಕೊಪ್ಪಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕಳಿಸುವ ಮೂಲಕ ಮಾಜಿ ಸಚಿವ ಶಿವರಾಜ ತಂಗಡಗಿ ಮಾನವೀಯತೆ ಮೆರೆದಿದ್ದಾರೆ‌.

ಮಾನವೀಯತೆ ಮೆರೆದ ಮಾಜಿ ಸಚಿವ

ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಬಳಿ ಇಂದು ಬೆಳಗ್ಗೆ ಎರಡು ಬೈಕ್​​ಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ದಂಪತಿ ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ತಮ್ಮ ಕಾರ್ ನಿಲ್ಲಿಸಿ ವಿಚಾರಿಸಿದ್ದಾರೆ.

ಗಂಗಾವತಿಗೆ ಹೊರಟಿದ್ದ ದಂಪತಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಇದನ್ನು ಕಂಡ ಮಾಜಿ ಸಚಿವ ಕಾರ್​ನಲ್ಲಿಯೇ ಆಸ್ಪತ್ರೆಗೆ ಕಳುಹಿಸಿದ್ದಾರೆ. ತಂಗಡಗಿ ಅವರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.