ಕೊಪ್ಪಳ : ಪಂಜಾಬ್‌ನಲ್ಲಿ ಪಿಎಂ ಭದ್ರತಾ ಲೋಪ ವಿಚಾರವನ್ನು ಬಿಜೆಪಿ ರಾಜಕೀಯಗೊಳಿಸಲು ಹೊರಟಿದೆ. ಇದರಿಂದ ಮತಗಳನ್ನು ಪಡೆಯಬಹುದು ಎಂದುಕೊಂಡಿದೆ. ಆದರೆ, ಅಲ್ಲಿ ಬಿಜೆಪಿಗೆ ಇಂದು ಒಂದು ಮತ ಬರುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ನಡೆಯುವ ಹುಸೇನಿವಾಲಾದಲ್ಲಿ ಯಾರೂ ಇದ್ದಿಲ್ಲ. ಖಾಲಿ ಕುರ್ಚಿಗಳು ಇದ್ದವು. ಅದಕ್ಕಾಗಿ ಈ ನಾಟಕ ಮಾಡಿದ್ದಾರೆ.
ಪಂಜಾಬ್ ರಾಜ್ಯ ಸರ್ಕಾರದಿಂದ ಭದ್ರತಾ ಲೋಪವಾಗಿಲ್ಲ. ಈ ಬಗ್ಗೆ ತನಿಖೆಯಾಗಲಿ, ಕಾನೂನು ಕ್ರಮಕೈಗೊಳ್ಳಲಿ. ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.
ಇನ್ನು ಮೇಕೆದಾಟು ಕುರಿತು ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆ ಕುರಿತು ಡಿಪಿಎಆರ್ ಸಿದ್ದಪಡಿಸಲಾಗಿದೆ. ಈ ವಿಷಯ ಕೇಂದ್ರದಲ್ಲಿ ಬಾಕಿ ಇದೆ. ಇದನ್ನು ಕ್ಲಿಯೆರ್ ಮಾಡಲು ಪಾದಯಾತ್ರೆ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ.
ನಾವು ಪಾದಯಾತ್ರೆ ಮಾಡಲು ನಿರ್ಧಾರ ತೆಗೆದುಕೊಂಡಾಗ ಕೋವಿಡ್ ಇರಲಿಲ್ಲ. ಈಗಲೂ ಅಷ್ಟೊಂದು ಪ್ರಮಾಣ ಇಲ್ಲ. ಸಿಎಂ ಆದವರು ಸೌಹಾರ್ದಯುತವಾಗಿ ರಿಕ್ವೆಸ್ಟ್ ಮಾಡಬೇಕು. ವಿರೋಧ ಪಕ್ಷದವರು ಎಂದರೆ ಮಾನ, ಮರ್ಯಾದೆ ಇರಲಾರದವರಲ್ಲ.
ನಾವು ಈ ದೇಶದಲ್ಲಿ ಆಡಳಿತ ಮಾಡಿದ್ದೇವೆ. ಗೃಹ ಮಂತ್ರಿಗಳು ಪಾದಯಾತ್ರೆ ಮಾಡಿದರೆ ನೋಡಿಯೇ ಬಿಡುತ್ತೇವೆ ಎಂದಿದ್ದಾರೆ. ಅವರು ಹಾಗೆ ಅಂದ ಮೇಲೆ ಸುಮ್ಮನಿರಲು ಆಗುತ್ತಾ?. ಹಾಗಾದ್ರೆ, ಅರೆಸ್ಟ್ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಅದರಲ್ಲಿ ತಪ್ಪೇನಿದೆ? ಬಿಜೆಪಿಯವರದ್ದೆಲ್ಲ ಭಾಷೆನಾ? ಸಿಎಂ ಬೊಮ್ಮಾಯಿಗೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಧೈರ್ಯವಿಲ್ಲ. ಬೊಮ್ಮಾಯಿಗೆ, ಯಡಿಯೂರಪ್ಪಗೆ ಮೋದಿ ಭೇಟಿ ಮಾಡಲು ಧೈರ್ಯವಿಲ್ಲ ಎಂದು ದೂರಿದರು.
ಇನ್ನು ಕೊಪ್ಪಳ ಏತನೀರಾವರಿ ಯೋಜನೆಗೆ ಹಣ ನೀಡಿದ್ದು ಸಿದ್ದರಾಮಯ್ಯ. ಅವರು ಬದ್ಧತೆ ಇರುವಂತಹ ವ್ಯಕ್ತಿ. ಹಿಂದಿನ ಸರ್ಕಾರಕ್ಕೆ ಬೈಯುವುದೇ ಬಿಜೆಪಿಯವರಿಗೆ ಕೆಲಸವಾಗಿದೆ.
ಸಚಿವ ಹಾಲಪ್ಪ ಆಚಾರ್ ಆಧಾರ ರಹಿತವಾಗಿ ಆರೋಪ ಮಾಡುತ್ತಾರೆ. ಮಂತ್ರಿಯಾಗಿ ಹಾಲಪ್ಪ ಆಚಾರ್ ತಿಳಿದುಕೊಂಡು ಮಾತನಾಡಬೇಕು. ಜನರು ನಿಮ್ಮನ್ನು ನೋಡಿ ನಗ್ತಾರೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಓದಿ: ರೌಡಿ ಕೊತ್ವಾಲನ ಶಿಷ್ಯ ಎನ್ನುವುದನ್ನು ಡಿಕೆಶಿ ವರ್ತನೆ ತೋರಿಸುತ್ತಿದೆ : ಬಿಜೆಪಿ 'ಟ್ವೀಕೆ'