ETV Bharat / state

ಸಿಎಂ ಹೆಚ್​ಡಿಕೆ ಒಂದು ರೀತಿ ಹಿಟ್ ಅಂಡ್ ರನ್ ಕೇಸ್​..  ಶಾಸಕ ಜಗದೀಶ್ ಶೆಟ್ಟರ್ ವಾಗ್ದಾಳಿ

author img

By

Published : Apr 7, 2019, 4:36 PM IST

ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಹೆಚ್‌ಡಿಕೆ ಒಂದು ರೀತಿ ಹಿಟ್‌ ಅಂಡ್‌ ರನ್‌ ಕೇಸ್‌ ಇದ್ದಂತೆ. ಅವರು ನೀಡುವ ಹೇಳಿಕೆಗಳಿಗೆ ಅವರೇ ಬದ್ಧರಾಗಿರಲ್ಲ ಅಂತಾ ಶೆಟ್ಟರ್‌ ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯ

ಕೊಪ್ಪಳ : ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒಂದು ರೀತಿ ಹಿಟ್ ಅಂಡ್ ರನ್ ಕೇಸ್‌ ಇದ್ದಂತೆ. ಮೊದಲು ಹೇಳುವುದು, ಮೈಮೇಲೆ ಬರುತ್ತಿದ್ದಂತೆ ನಾ ಹೇಳಿಯೇ ಇಲ್ಲ ಎಂದು ಯೂಟರ್ನ್‌ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿ ವಿಚಾರ ನನಗೆ ಮೊದಲೇ ಗೊತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಮಾಧ್ಯಮಗಳಲ್ಲಿಯೂ ಸಹ ಬಂದಿದೆ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಈಗ ನಾನು ಆ ವಿಷಯ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಈ ಹಿಂದೆಯೂ ಈ ರೀತಿ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡೋದು, ಆಮೇಲೆ ನಾನು ಹೇಳಿಲ್ಲ ಅನ್ನೋದು. ದಾಳಿ ವಿಚಾರ ಮೊದಲೇ ಗೊತ್ತಿದ್ದರೆ, ಯಾಕೆ ಕೇಂದ್ರ ಗುಪ್ತಚರ ಇಲಾಖೆಗೆ ತಿಳಿಸಲಿಲ್ಲ. ಇದು ದೇಶದ್ರೋಹದ ಕೆಲಸವಾಗುತ್ತದೆ ಎಂದರು.

ಹಾಲಿ ಸಿಎಂ ಹೆಚ್‌ಡಿಕೆ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯ

ಸಚಿವ ಸಿ. ಎಸ್. ಪುಟ್ಟರಾಜು ಹಾಗೂ ಜಿ. ಮಾದೇಗೌಡ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿಯಾದಾಗ ಸಿಎಂ ಕುಮಾರಸ್ವಾಮಿ, ಸಚಿವ ಡಿಕೆಶಿ ಸೇರಿ ಮೊದಲಾದವರು ಪ್ರತಿಭಟಿಸಿದರು. ಈಗ ಮಂಡ್ಯದಲ್ಲಿ ಹಣ ಹರಿದಾಡುತ್ತಿದೆ ಎಂಬುದಕ್ಕೆ ವೈರಲ್ ಆಗಿರುವ ಈ ಆಡಿಯೋ ಉದಾಹರಣೆ. ಹಣದ ಕುರಿತಂತೆ ಆಡಿಯೋ ವೈರಲ್ ಆಗಿರೋದು ನಾಚಿಕೆಗೇಡು. ಮಂಡ್ಯದಲ್ಲಿ ಹಣದ ಅವ್ಯವಹಾರ ಶುರುವಾಗಿದೆ. ಈ ಬಗ್ಗೆ ಈ ಹಿಂದೆಯೇ ಸುಮಲತಾ ಅವರು ಸಹ ಆರೋಪಿಸಿದ್ದರು. ಮತದಾರರಿಗೆ ಆಮಿಷ ಒಡ್ಡುವುದನ್ನು ಅಲ್ಲಿ ಶುರು ಮಾಡಿದ್ದಾರೆ ಎಂಬುದಕ್ಕೆ ಆಡಿಯೋ ಮೇಲ್ನೋಟಕ್ಕೆ ಸಾಕ್ಷಿಯಾಗುತ್ತದೆ.

ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರಿಗೆ ಸರ್ಕಾರ ಹಣ ಪಾವತಿಸಿದೆ. ಚುನಾವಣೆಗೆ ಹಣ ಬಳಸುವುದೇ ಇದರ ಉದ್ದೇಶ. ಇದೇ ಹಣದಿಂದ ಮೈತ್ರಿ ಸರ್ಕಾರ ಚುನಾವಣೆ ಮಾಡುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು.

Intro:

Body:ಕೊಪ್ಪಳ :- ಸಿಎಂ ಎಚ್.ಡಿ. ಕುಮಾರಸ್ವಾಮಿ ಒಂದು ರೀತಿ ಹಿಟ್ ಅಂಡ್ ರನ್ ತರಹ. ಮೊದಲು ಹೇಳುವುದು, ಮೈ ಮೇಲೆ ಬರುತ್ತಿದ್ದಂತೆ ನಾ ಹೇಳಿಲ್ಲ ಎಂದು ಹೇಳುತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮ ದಾಳಿ ವಿಚಾರ ನನಗೆ ಮೊದಲೇ ಗೊತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಮಾಧ್ಯಮಗಳಲ್ಲಿಯೂ ಸಹ ಬಂದಿದೆ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಈಗ ನಾನು ಆ ವಿಷಯ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಈ ಹಿಂದೆಯೂ ಈ ರೀತಿ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡೋದು ಆಮೇಲೆ ನಾನು ಹೇಳಿಲ್ಲ ಅನ್ನೋದು. ಕುಮಾರಸ್ವಾಮಿ ಸ್ಥಾನದಲ್ಲಿದ್ದಾರೆ. ದಾಳಿ ವಿಚಾರ ಮೊದಲೇ ಗೊತ್ತಿದ್ದರೆ ಯಾಕೆ ಕೇಂದ್ರ ಗುಪ್ತಚರ ಇಲಾಖೆಗೆ ತಿಳಿಸಲಿಲ್ಲ. ಇದು ದೇಶದ್ರೋಹದ ಕೆಲಸವಾಗುತ್ತದೆ ಎಂದರು. ಹೆಣ್ಣು ಇನ್ನು ಸಚಿವ ಸಿ. ಎಸ್. ಪುಟ್ಟರಾಜು ಹಾಗೂ ಜಿ. ಮಾದೇಗೌಡ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿಯಾದಾಗ ಸಿಎಂ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಪ್ರತಿಭಟನೆ ಮಾಡಿದರು. ಈಗ ಮಂಡ್ಯದಲ್ಲಿ ಹಣ ಹರಿದಾಡುತ್ತಿದೆ ಎಂಬುದಕ್ಕೆ ವೈರಲ್ ಆಗಿರುವ ಈ ಆಡಿಯೋ ವೈರಲ್ ಉದಾಹರಣೆ. ಹಣದ ಕುರಿತಂತೆ ಆಡಿಯೋ ವೈರಲ್ ಆಗಿರೋದು ನಾಚಿಕೆಗೇಡು. ಮಂಡ್ಯದಲ್ಲಿ ಹಣದ ಅವ್ಯವಹಾರ ಶುರುವಾಗಿದೆ. ಈ ಬಗ್ಗೆ ಈ ಹಿಂದೆಯೇ ಸುಮಲತಾ ಅವರು ಸಹ ಆರೋಪಿಸಿದ್ದರು. ಮತದಾರರಿಗೆ ಆಮಿಷ ಒಡ್ಡುವುದು ಅಲ್ಲಿ ಶುರು ಮಾಡಿದ್ದಾರೆ ಎಂಬುದಕ್ಕೆ ಆಡಿಯೋ ಮೇಲ್ನೋಟಕ್ಕೆ ಸಾಕ್ಷಿಯಾಗುತ್ತದೆ. ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರಿಗೆ ಸರ್ಕಾರ ಹಣ ಪಾವತಿಸಿದೆ. ಕಾರಣ ಚುನಾವಣೆಗೆ ಹಣ ಬಳಕೆ ಉದ್ದೇಶದಿಂದ. ಇದೇ ಹಣದಿಂದ ಮೈತ್ರಿ ಸರ್ಕಾರ ಚುನಾವಣೆ ಮಾಡುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.