ETV Bharat / state

ಉಡ ಹಿಡಿದು ಜೀವಂತವಾಗಿ ನಾಯಿಗಳಿಗೆ ಕೊಟ್ಟವನನ್ನು 'ಬೇಟೆಯಾಡಿದ' ಅರಣ್ಯ ಅಧಿಕಾರಿಗಳು - ಗಂಗಾವತಿ ಉಡ ಸುದ್ದಿ

ಉಡ ಹಿಡಿದು ಅದನ್ನು ನಾಯಿಗಳಿಗೆ ಹಾಕಿ ವಿಕೃತಿ ಮೆರೆದಿದ್ದ ಯುವಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Arrest
Arrest
author img

By

Published : Jun 15, 2020, 8:40 PM IST

ಗಂಗಾವತಿ: ಸರಿಸೃಪ ಜಾತಿಯ ಉಡವನ್ನು ಹಿಡಿದು ಜೀವಂತವಾಗಿ ನಾಯಿಗಳ ಬಾಯಿಗೆ ಕೊಟ್ಟು ವಿಕೃತಿ ಮೆರೆದ ಯುವಕನನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಿಡಿದು ಆತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ತಾಲ್ಲೂಕಿನ ಮಲ್ಲಾಪುರ ಗ್ರಾಮದ ತಾತಪ್ಪ ಎಂಬ 25 ವರ್ಷದ ಯುವಕ ಈ ವಿಕೃತಿ ಮರೆದಿದ್ದು, ಇತ್ತೀಚೆಗೆ ಗ್ರಾಮದಲ್ಲಿ ಉಡವೊಂದನ್ನು ಬೇಟೆಯಾಡಿ ಅದನ್ನು ಎರಡು ನಾಯಿಗಳಿಗೆ ತಿನ್ನಲು ನೀಡಿ ಮನರಂಜನೆ ಪಡೆದು ವಿಕೃತಿ ಮೆರೆದಿದ್ದ. ಸಾಲದು ಎಂಬಂತೆ ಅದನ್ನು ವಿಡಿಯೋ ಮಾಡಿ ಟಿಕ್​ಟಾಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಸೋಮವಾರ ಮಧ್ಯಾಹ್ನ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಯುವಕನ್ನು ಪತ್ತೆ ಹಚ್ಚಿದ್ದಾರೆ.

ಆರ್​ಎಫ್​ಒ ಶಿವರಾಜ ಮೇಟಿ ನೇತೃತ್ವದಲ್ಲಿ ಕೂಡಲೆ ಆತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಿದ್ದಾರೆ.

ಕಾರ್ಯಾಚರಣೆ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವೈ ಬೀಳಗಿ, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ ಮೂಲೇರ್ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.