ಕೊಪ್ಪಳ: ಆಶಾ ಕಾರ್ಯಕರ್ತೆಯರು ಹಾಗೂ ಹೋಂ ಗಾರ್ಡ್ಗಳಿಗೆ ಭಾಗ್ಯ ನಗರದ ಉದ್ಯಮಿ ಕೆ.ಶ್ರೀನಿವಾಸ ಗುಪ್ತಾ, ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಿಸಿದರು.
ಲಾಕ್ಡೌನ್ ಹಿನ್ನೆಲೆ ಕೆಲಸ ನಿರ್ವಹಿಸುತ್ತಿರುವ ಈ ಸಿಬ್ಬಂದಿಗೆ ಕಿಟ್ ವಿತರಿಸಿದ್ದಾರೆ. ಸುಮಾರು 400 ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳು ಕಿಟ್ನಲ್ಲಿದ್ದು, 19 ಆಶಾ ಕಾರ್ಯಕರ್ತೆಯರು ಹಾಗೂ 160 ಗೃಹರಕ್ಷಕ ದಳದ ಸಿಬ್ಬಂದಿಗೆ ಇಂದು ವಿತರಿಸಿದರು. ಇನ್ನು ತಮ್ಮ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 400 ಕಾರ್ಮಿಕರಿಗೂ ಗುಪ್ತಾ ಅವರು ಈಗಾಗಲೇ ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದಾರೆ.