ಕೊಪ್ಪಳ: ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆ, ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿರುವ ರೆಸಾರ್ಟ್ಗಳ 21 ಜನರ ಮೇಲೆ FIR ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.
ಈ ಕುರಿತಂತೆ ತಾಲೂಕಿನ ಮುನಿರಾಬಾದ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಸಿಗರು ಪ್ರವಾಹ ಭೀತಿ ಎದುರಿಸುತ್ತಿದ್ದರು. ಆದರೂ ಪ್ರವಾಸಿಗರಿಗೆ ಅಲ್ಲಿನ ರೆಸಾರ್ಟ್ ಮಾಲೀಕರು ಮಾಹಿತಿ ನೀಡದೆ ಪ್ರವಾಹ ಭೀತಿ ಎದುರಿಸುವಂತೆ ಮಾಡಿದ್ದರು.
ಇದರಿಂದಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೆಸಾರ್ಟ್ನ 21 ಜನರ ವಿರುದ್ಧ ಸೆಕ್ಷನ್ 336, 338 ಹಾಗೂ 339 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. 21 ಜನರನ್ನು ಅರೆಸ್ಟ್ ಮಾಡಲು ಅವಕಾಶವಿದೆ. ಆ ಬಗ್ಗೆ ಲೀಗಲ್ ಒಪಿನಿಯನ್ ಪಡೆದು, ಕ್ರಮ ಕೈಗೊಳ್ಳಲಾಗುತ್ತದೆ ಎಂದರು.