ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣವಿದ್ದು, ಹುಳಿಗಡಲೆ ಬೆಳೆಗೆ ಹಾನಿಯಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹುಳಿಗಡಲೆ ಬೆಳೆಯಲಾಗಿದೆ. ಈಗ ಹೂವು, ಕಾಯಿ ಕಟ್ಟುವ ಸಮಯ. ಇಂತಹ ಸಂದರ್ಭದಲ್ಲಿ ಮೋಡ ಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಾಗುತ್ತಿರೋದು ರೈತರ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಈ ವಾತಾವರಣದಿಂದ ಕೀಟಬಾಧೆ ಹೆಚ್ಚಾಗುತ್ತದೆ.
ಈ ಹಿಂದೆ ಸುರಿದ ಮಳೆಯಿಂದಾಗಿ ಮೆಣಸಿಕಾಯಿ ಹಾಗೂ ಇತರೆ ಬೆಳೆ ಹಾನಿಗೊಳಗಾಗಿ ನಷ್ಟ ಅನುಭವಿಸಿದ್ದೆವು. ಈಗ ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದು, ಹುಳಿಗಡಲೆ ಬೆಳೆ ನಾಶವಾಗುವ ಆತಂಕದಲ್ಲಿದ್ದೇವೆ ಎನ್ನುತ್ತಿದ್ದಾರೆ ರೈತರು.