ಗಂಗಾವತಿ(ಕೊಪ್ಪಳ): ಬಿಜೆಪಿ ಕಾರ್ಯಕರ್ತನೋರ್ವ ತಮ್ಮ ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ಮುಂದಾಗಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪೂರ ನಿವಾಸಿ ದೇವರಾಜ್ ಎಂಬುವರು ತಮ್ಮ ಮಗಳಿಗೆ ದಿವಂಗತ ರಾಜಕಾರಣಿ ಸುಷ್ಮಾ ಸ್ವರಾಜ್ ಅವರ ಹೆಸರಿಡಲು ಮುಂದಾಗಿದ್ದಾರೆ. ಅಲ್ಲದೇ ಮಗಳ ನಾಮಕರಣಕ್ಕೆ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಬರಬೇಕೆಂದು ಸಾಮಾನ್ಯ ಕಾರ್ಯಕರ್ತ ಪಟ್ಟು ಹಿಡಿದಿದ್ದಾರೆ.
ಸುಷ್ಮಾ ಸ್ವರಾಜ್ ಅವರಿಗೆ ರೆಡ್ಡಿ, ರಾಮುಲು ಮಾನಸ ಪುತ್ರರು. ಹೀಗಾಗಿ ನನ್ನ ಮಗಳಿಗೆ ಅವರು ಬಂದು ನಾಮಕಾರಣ ಮಾಡಬೇಕು ಎಂಬುದು ಈ ಕಾರ್ಯಕರ್ತನ ಬೇಡಿಕೆಯಾಗಿದೆ. ಅವರು ಬರೋವರೆಗೂ ಮಗಳಿಗೆ ನಾಮಕರಣ ಮಾಡುವುದಿಲ್ಲ ಎನ್ನುತ್ತಿದ್ದಾರೆ ಈ ಅಭಿಮಾನಿ.
ಸುಷ್ಮಾ ಸ್ವರಾಜ್ ಅಭಿಮಾನಿಯಾಗಿರೋ ದೇವರಾಜ್ಗೆ ಕಳೆದ ಕೆಲ ದಿನಗಳ ಹಿಂದೆ ಹೆಣ್ಣು ಮಗು ಜನಿಸಿದೆ. ಮಗಳಿಗೆ ಅವರ ಹೆಸರಿಡಲು ಮುಂದಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಸಚಿವ ಶ್ರೀರಾಮುಲು ಅವರು ನಾಮಕರಣ ಕಾರ್ಯಕ್ಕೆ ಬರೋವರೆಗೂ ಮಗಳಿಗೆ ಹೆಸರಿಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತು ಜನಾರ್ದನ ರಡ್ಡಿ ಮತ್ತು ಶ್ರೀರಾಮುಲು ಆಪ್ತ ಸಹಾಕರಿಗೂ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ದೇವರಾಜ್ಗೆ ಮಗು ಜನಿಸುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಗು ಜನಿಸಿದರೆ ಸುಷ್ಮಾ ಸ್ವರಾಜ್ ಎಂದು ನಾಮಕರಣ ಮಾಡುತ್ತೇನೆ ಎಂದು ಬರೆದುಕೊಂಡಿದ್ದರಂತೆ.
ಈ ಮೂಲಕ ಸುಷ್ಮಾ ಸ್ವರಾಜ್ ಅಭಿಮಾನಿಗಳು ಕೊಪ್ಪಳದಲ್ಲಿದ್ದು, ದೇವರಾಜ್ ಮಗಳ ನಾಮಕರಣಕ್ಕೆ ಬಿಜೆಪಿ ನಾಯಕರಾದ ಶ್ರೀರಾಮುಲು, ಜನಾರ್ದನ ರಡ್ಡಿ ಬರುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ವರಮಹಾಲಕ್ಷ್ಮಿ ಹಬ್ಬ ಮಾಡಿ ಸಂಭ್ರಮಿಸಿದ ಮುಸ್ಲಿಂ ಕುಟುಂಬ