ಗಂಗಾವತಿ : ತನ್ನ ಫೇಸ್‌ಬುಕ್ ಖಾತೆ ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಭಾನುವಾರ ಸಂಜೆ ನಗರ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
![ML A Paranna Manavalli](https://etvbharatimages.akamaized.net/etvbharat/prod-images/7519729_847_7519729_1591543936171.png)
ತನ್ನ ಖಾತೆ ಮೂಲಕ ಮೊಬೈಲ್ ನಂಬರ್ವೊಂದನ್ನು ಬಳಸಿ ತನ್ನ ಕಾರ್ಯಕರ್ತರಾದ ರುದ್ರೇಶ್ ಮತ್ತು ಇತರರಿಗೆ 13, 011 ಹಾಗೂ 7 ಸಾವಿರ ರೂ. ಹಣವನ್ನು ಹಾಕುವಂತೆ ಯಾರೋ ಕಿಡಿಗೇಡಿಗಳು ಮೆಸೇಜ್ ಕಳಿಸಿದ್ದಾರೆ.
ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಶಾಸಕರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆ.