ETV Bharat / state

ಕೊಪ್ಪಳದಲ್ಲಿ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ - Exhibition of Fruits in Koppal

ಕೊಪ್ಪಳದಲ್ಲಿ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ರೈತರ ಫಾರ್ಮ್​ನಿಂದ ನೇರವಾಗಿ ಬಂದಿರುವ ಹಣ್ಣುಗಳನ್ನು ಗ್ರಾಹಕರು ಕೊಂಡು ರುಚಿ ಸವಿಯುತ್ತಿದ್ದಾರೆ.

Exhibition of Fruits in Koppal
ಕೊಪ್ಪಳದಲ್ಲಿ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ
author img

By

Published : Mar 8, 2021, 10:21 PM IST

ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಆಯೋಜಿಸಿರುವ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ರೈತರ ಫಾರ್ಮ್​ನಿಂದ ನೇರವಾಗಿ ಬಂದಿರುವ ಹಣ್ಣುಗಳು ಗ್ರಾಹಕರ ಬಾಯಲ್ಲಿ ನೀರೂರಿಸುತ್ತಿವೆ.

ಕೊಪ್ಪಳದಲ್ಲಿ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ

ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಪಪ್ಪಾಯಿ, ಅಂಜೂರ, ಬಾಳೆ, ಪೇರಲ, ದಾಳಿಂಬೆ ದ್ರಾಕ್ಷಿ ಹಣ್ಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸುಮಾರು 20 ಸ್ಟಾಲ್​ಗಳಿರುವ ಈ ಮಾರಾಟ ಮೇಳದಲ್ಲಿ ರೈತರು, ಗ್ರಾಹಕರ ನಡುವೆ ವಹಿವಾಟು ನಡೆಯುತ್ತಿದ್ದು ಬಾಂಧವ್ಯ ಬೆಸೆದಂತಾಗುತ್ತಿದೆ. ಗ್ರಾಹಕರಿಗೆ ಹೊರೆಯಾಗದ ಹಾಗೂ ರೈತರಿಗೆ ನಷ್ಟವಾಗದ ರೀತಿಯಲ್ಲಿ ಉತ್ತಮ ಧಾರಣಿಯಲ್ಲಿ ಇಲ್ಲಿ ವಿವಿಧ ಹಣ್ಣುಗಳು ವ್ಯಾಪಾರವಾಗುತ್ತಿವೆ.

ಇನ್ನು ಈಗ ಶಿವರಾತ್ರಿ ಸಂದರ್ಭ ಹಾಗೂ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಲ್ಕು ದಿನ ಮೇಳ ನಡೆಯಲಿದೆ. ಬೇಸಿಗೆ ಕಾಲಕ್ಕೆ ಅನುಕೂಲವಾಗುವ ಹಾಗೂ ಹಿತ ನೀಡುವ ಹಣ್ಣುಗಳನ್ನು ಕೊಂಡುಕೊಳ್ಳಲು ಮಾರಾಟ ಮೇಳಕ್ಕೆ ಗ್ರಾಹಕರು ಬರುತ್ತಿದ್ದಾರೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಮಾರಾಟ ಮೇಳದಲ್ಲಿ ಭಾಗವಹಿಸಿರುವ ರೈತರು. ಗ್ರಾಹಕರಿಗೆ ಗುಣಮಟ್ಟದ ಹಣ್ಣು ಸಿಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.