ಕುಷ್ಟಗಿ (ಕೊಪ್ಪಳ): ತಾಲೂಕಿನ ಹಿರೇನಂದಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ. ಪರಿಣಾಮ, ಅಪಾರ ಪ್ರಮಾಣದ ನೀರು ಚರಂಡಿ ಸೇರುತ್ತಿದ್ದು ಕೂಡಲೇ ಸಂಬಂಧಪಟ್ಟವರು ಪೈಪ್ ಸರಿಪಡಿಸುವಂತೆ ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.
ಶುದ್ಧ ಕುಡಿಯುವ ನೀರು ಚರಂಡಿ ನೀರು ಜೊತೆ ಬೆರೆಯುತ್ತಿದ್ದು ಜನರು ಅದನ್ನೇ ದಿನಬಳಕೆಗೆ ಬಳಸುವಂತಾಗಿದೆ. ಇದರಿಂದ ಖಾಯಿಲೆ ಹರಡುವ ಭೀತಿ ಎದುರಾಗಿದೆ. ಸ್ಥಳೀಯ ಗ್ರಾ.ಪಂ.ಅಧಿಕಾರಿಗಳು ಇತ್ತ ಗಮನಹರಿಸಿ ಸರಿಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕೆಸರು ಮಯವಾದ ರಸ್ತೆಗಳು:
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು ಕೆಸರು ಮಯವಾಗಿದೆ. ಇದರಲ್ಲಿಯೇ ಜನರು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.