ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗಿಗಳಿಗೆ ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಆದ್ರೆ ನಗರದ ಜಿಲ್ಲಾಸ್ಪತ್ರೆ ನಾಯಿಗಳ ವಾಸ ಸ್ಥಾನವಾಗಿದೆಯಾ ಎಂಬ ಅನುಮಾನಗಳು ಮೂಡಿವೆ.
ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತೆ ಕೊಠಡಿಯೊಂದು ನಾಯಿಯ ವಾಸ ಸ್ಥಳವಾಗಿದೆ. ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಕೊಠಡಿಯೊಂದರೊಳಗೆ ನಾಯಿಯೊಂದು ಬೀಡುಬಿಟ್ಟಿದೆ.
ಈ ಮೊದಲು ಆ ಕೊಠಡಿಯಲ್ಲಿ ಕೊರೊನಾ ಲಸಿಕೆ ಹಾಕಲಾಗುತ್ತಿತ್ತು. ಈಗ ಲಸಿಕೆ ಹಾಕುವ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಖಾಲಿ ಇರುವ ಈ ಕೊಠಡಿಯಲ್ಲಿ ನಾಯಿ ಬಂದು ಮಲಗಿಕೊಂಡಿದೆ. ಸಿಬ್ಬಂದಿ ಅಲ್ಲಿಯೇ ಓಡಾಡುತ್ತಿದ್ದರೂ ಸಹ ನಾಯಿಯನ್ನು ಓಡಿಸದೆ ಸುಮ್ಮನಿದ್ದರು. ಇದು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಓದಿ: ರಾಜಧಾನಿಯಲ್ಲಿ 2ವಾರದಲ್ಲಿ ಕೋವಿಡ್ ಹತೋಟಿಗೆ.. ಗ್ರಾಮೀಣ ಪ್ರದೇಶದಲ್ಲಿ ಏರಿಕೆ.. ಸಚಿವ ಡಾ. ಸುಧಾಕರ್