ETV Bharat / state

ಮಗನ ಹುಟ್ಟುಹಬ್ಬಕ್ಕೆ ಅಪ್ಪ ನೀಡಿದ ಉಡುಗೊರೆ ಏನು ಗೊತ್ತಾ ?

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹುಸೇನ್ ದೊಡ್ಡಮನಿ ಎಂಬುವವರು, ತಮ್ಮ ಮಗನ ಹುಟ್ಟುಹಬ್ಬದ ಉಡುಗೊರೆಯಾಗಿ ಗ್ರಾಮದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಸುಣ್ಣ - ಬಣ್ಣ ಹಚ್ಚಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಗನ ಹುಟ್ಟುಹಬ್ಬಕ್ಕೆ ಸಾರ್ವಜನಿಕ ಗ್ರಂಥಾಲಯಕ್ಕೆ ಸುಣ್ಣ ಬಣ್ಣ ಹಚ್ಚಿಸಿದ ಶಿಕ್ಷಕ

author img

By

Published : Dec 3, 2020, 7:52 PM IST

ಗಂಗಾವತಿ (ಕೊಪ್ಪಳ): ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಲಿಹೈದರ ಗ್ರಾಮದ ಶಿಕ್ಷಕರೊಬ್ಬರು ತಮ್ಮ ಮಗನ ಹುಟ್ಟುಹಬ್ಬಕ್ಕಾಗಿ ಗ್ರಾಮದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಸುಣ್ಣ-ಬಣ್ಣ ಬಳಿದು, ಸ್ಥಗಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಕೊಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮಗನ ಹುಟ್ಟುಹಬ್ಬಕ್ಕೆ ಸಾರ್ವಜನಿಕ ಗ್ರಂಥಾಲಯಕ್ಕೆ ಸುಣ್ಣ ಬಣ್ಣ ಹಚ್ಚಿಸಿದ ಶಿಕ್ಷಕ

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹುಸೇನ್ ದೊಡ್ಡಮನಿ ಎಂಬುವವರು, ಪ್ರಥಮ ಬಿಎಸ್ಸಿ ಓದುತ್ತಿರುವ ತಮ್ಮ ಮಗ ಸಲ್ಮಾನ್ ಖಾನ್​​ನ 20ನೇ ವರ್ಷದ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ.

ಡಿ. 5ರ ಕರ್ನಾಟಕ ಬಂದ್​ಗೆ ಕೊಪ್ಪಳದ ಕನ್ನಡಪರ ಸಂಘಟನೆಗಳಿಂದ ಸಂಪೂರ್ಣ ಬೆಂಬಲ

ಹಾಗಾಗಿ ಗ್ರಾಮದ ಸಾರ್ವಜನಿಕರು ಮತ್ತು ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರಂಥಾಲಯಕ್ಕೆ ಸುಣ್ಣ - ಬಣ್ಣ ಬಳಿಸಿ ಅಂದವಾಗಿಸಿದ್ದಾರೆ. ಅಷ್ಟು ಸಾಲದು ಎಂಬಂತೆ ಗೋಡೆ ಬರಹಗಳ ಮೂಲಕ ಜನರನ್ನು ಪ್ರೇರೇಪಿಸಲು ಯತ್ನಿಸಿದ್ದಾರೆ. ಶಿಕ್ಷಕರ ಕಾರ್ಯ ಮೆಚ್ಚಿದ ಗಂಗಾವತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ. ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಸಂಸತ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.