ETV Bharat / state

ಕಾಮಗಾರಿ ವಾಪಸ್​​​​ ಪಡೆದು ಜಿಲ್ಲಾಡಳಿತದಿಂದ ಎಸ್ಸಿ-ಎಸ್ಟಿ ಜನಾಂಗಕ್ಕೆ ಅನ್ಯಾಯ: ಸುರೇಶ್ ಭೂಮರೆಡ್ಡಿ

ಪಿಡಬ್ಲೂಡಿ ಹಾಗೂ ಆರ್​ಡಿಪಿಆರ್​ಇಡಿಗೆ ನೀಡಿದ್ದ ಕಾಮಗಾರಿಗಳನ್ನು ಮತ್ತೆ ವಾಪಸ್ ಪಡೆದು ಲ್ಯಾಂಡ್ ಆರ್ಮಿಗೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಜಿಲ್ಲಾಡಳಿತ ಕ್ರಮ ಸರಿಯಿಲ್ಲ. ಇದರಿಂದ ಎಸ್ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ಆರೋಪಿಸಿದರು.

Suresh Bhumareddy
author img

By

Published : Nov 2, 2019, 8:01 PM IST

ಕೊಪ್ಪಳ: ಪಿಡಬ್ಲೂಡಿ ಹಾಗೂ ಆರ್​ಡಿಪಿಆರ್​ಇಡಿಗೆ ನೀಡಿದ್ದ ಕಾಮಗಾರಿಗಳನ್ನು ಮತ್ತೆ ವಾಪಸ್ ಪಡೆದು ಲ್ಯಾಂಡ್ ಆರ್ಮಿಗೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಜಿಲ್ಲಾಡಳಿತ ಕ್ರಮ ಸರಿಯಿಲ್ಲ. ಇದರಿಂದ ಎಸ್ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ಆರೋಪಿಸಿದರು.

ಮೀಡಿಯಾ ಕ್ಲಬ್​ನಲ್ಲಿ ಸುದ್ದಿಗೋಷ್ಠಿ

ನಗರದ ಮೀಡಿಯಾ ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಪಿಡಬ್ಲೂಡಿ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಗಳಿಗೆ 12ರಿಂದ 13 ಲಕ್ಷ ರೂಪಾಯಿ ಮೊತ್ತದ ಒಟ್ಟು 13 ಕಾಮಗಾರಿಗಳನ್ನು ಕೊಡಲಾಗಿತ್ತು. ಆದರೆ ಈ ಟೆಂಡರ್​​ಗಳನ್ನು ವಾಪಸ್ ಪಡೆದು ಆ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಹಾಗೂ ಲ್ಯಾಂಡ್ ಆರ್ಮಿಗೆ ಜಿಲ್ಲಾಧಿಕಾರಿಗಳು ವಹಿಸಿದ್ದು, ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತದೆ ಎಂದು ದೂರಿದರು.

ಸುಮಾರು 50 ಲಕ್ಷದೊಳಗಿನ ಕಾಮಗಾರಿಗಳನ್ನು ಕಡ್ಡಾಯವಾಗಿ ಮೀಸಲಾತಿ ಪದ್ಧತಿಯಲ್ಲಿ ಟೆಂಡರ್ ಮೂಲಕ ಕಾಮಗಾರಿ‌‌ ನಿರ್ವಹಿಸಲು ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಕಾನೂನು ಮಾಡಿದೆ. ಆದರೆ ಜಿಲ್ಲಾಡಳಿತ ಈ ಕಾನೂನಿನ ವಿರುದ್ಧ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.

Intro:

Body:ಕೊಪ್ಪಳ:- ಪಿಡಬ್ಲೂಡಿ (PWD) ಹಾಗೂ ಆರ್ಡಿಪಿಆರ್ಇಡಿ (RDPRED) ಗೆ ನೀಡಿದ್ದ ಕಾಮಗಾರಿಗಳನ್ನು ಮತ್ತೆ ವಾಪಾಸ್ ಪಡೆದು ಲ್ಯಾಂಡ್ ಆರ್ಮಿಗೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಜಿಲ್ಲಾಡಳಿತ ಕ್ರಮ ಸರಿಯಾದುದಲ್ಲ. ಇದರಿಂದ ಎಸ್ ಸಿಎಸ್ಟಿ ಹಾಗೂ ಸಾಮಾನ್ಯ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಹೇಳಿದ್ದಾರೆ. ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಪಿಡಬ್ಲೂಡಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಳಿಗೆ 12 ರಿಂದ 13 ಲಕ್ಷ ರುಪಾಯಿ ಮೊತ್ತದ ಒಟ್ಟು 13 ಕಾಮಗಾರಿಗಳನ್ನು ವಹಿಸಿಕೊಡಲಾಗಿತ್ತು. ಈ ಆ ಟೆಂಡರ್ ಗಳನ್ನು ವಾಪಾಸ್ ಪಡೆದು ಆ ಕಾಮಗಾರಿಗಳನ್ನು ನಿರ್ಮಿತಿಕೇಂದ್ರ ಹಾಗೂ ಲ್ಯಾಂಡ್ ಆರ್ಮಿಗೆ ಜಿಲ್ಲಾಧಿಕಾರಿಗಳು ವಹಿಸಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತದೆ. ಅದರಲ್ಲೂ ಎಸ್ಸಿ ಎಸ್ಟಿ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತದೆ. 50 ಲಕ್ಷದೊಳಗಿನ ಕಾಮಗಾರಿಗಳನ್ನು ಕಡ್ಡಾಯವಾಗಿ ಮೀಸಲಾತಿ ಪದ್ದತಿಯಲ್ಲಿ ಟೆಂಡರ್ ಮೂಲಕ ಕಾಮಗಾರಿ‌‌ ನಿರ್ವಹಿಸಲು ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಕಾನೂನು ಮಾಡಿದೆ. ಆದರೆ, ಕೊಪ್ಪಳ‌ ಜಿಲ್ಲಾಡಳಿತ ಈ ಕಾನೂನಿನ ವಿರುದ್ಧ ನಡೆದುಕೊಳ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಸುರೇಶ್ ಭೂಮರಡ್ಡಿ ಹೇಳಿದರು. ಗುತ್ತಿಗೆದಾರರ ಸಂಘದ ಕೃಷ್ಣ ಇಟ್ಟಂಗಿ ಸೇರಿದಂತೆ ಮೊದಲಾದವರು ಪ್ರೆಸ್ಮೀಟ್ ನಲ್ಲಿ ಉಪಸ್ಥಿತರಿದ್ದರು.

ಬೈಟ್1:- ಸುರೇಶ್ ಭೂಮರಡ್ಡಿ, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.