ಗಂಗಾವತಿ: ಹನುಮನ ಭಕ್ತರಿಗೂ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೂ ಬಿಡಿಸಲಾಗದ ನಂಟು. ಹನುಮನ ಭಕ್ತರು ರಾಜ್ಯ ಮಾತ್ರವಲ್ಲ, ದೇಶದ ಯಾವುದೇ ಮೂಲೆಯಲ್ಲಿದ್ದರೂ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿ ಪುನೀತರಾಗಬೇಕು ಎಂಬ ಹೆಬ್ಬಯಕೆ ಹೊಂದಿರುತ್ತಾರೆ. ಆದರೆ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ತಾಲೂಕಿನ ತಹಶೀಲ್ದಾರ್ ಎಂ.ರೇಣುಕಾ ಆದೇಶ ಹೊರಡಿಸಿದ್ದಾರೆ.
ಡಿ. 27ರಂದು ಹನುಮ ಜಯಂತಿ ಪ್ರಯುಕ್ತ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಆಗಮಿಸುವ ಬೆಟ್ಟಕ್ಕೆ ಪ್ರವೇಶ ಪಡೆಯುವ ಸಂಭವವಿದೆ. ಅಲ್ಲದೆ ಮಾಲಾ ವಿಸರ್ಜನೆ, ಹೋಮ ಹವನಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ.
ಓದಿ: ಕೊರೊನಾ ಎಫೆಕ್ಟ್: ಕ್ರೀಡಾಪಟುಗಳಿಗೆ ಕಾಡಿದ ಫಿಟ್‌ನೆಸ್ ಸಮಸ್ಯೆ
ಆದರೆ ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಭೀತಿ ಆವರಿಸುತ್ತಿರುವ ಹಿನ್ನೆಲೆ ಹಾಗೂ ಜಿಲ್ಲೆಯಲ್ಲಿ ಡಿ. 27ರಂದು 2ನೇ ಹಂತದ ಚುನಾವಣೆ ಇರುವ ಕಾರಣಕ್ಕೆ ಜಾತ್ರೆ, ಸಂತೆ, ವಿಶೇಷ ಧಾರ್ಮಿಕ ಮೆರವಣಿಗೆ ನಿಷೇಧಿಸುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅಲ್ಲದೇ ಆನೆಗೊಂದಿ ಸುತ್ತಲೂ ವನ್ಯ ಪ್ರಾಣಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆ ಅಂಜನಾದ್ರಿ ಪರ್ವತಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಡಿ. 27ರಂದು ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಹಶೀಲ್ದಾರ್ ಆದೇಶಿಸಿದ್ದಾರೆ.