ಕುಷ್ಟಗಿ (ಕೊಪ್ಪಳ): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಂದರ್-ಬಾಹರ್ ಜೂಜಾಟ ನಿರತರ ಮೇಲೆ ಕುಷ್ಟಗಿ ಪೊಲೀಸರು ಏಕಾಏಕಿ ದಾಳಿ ನಡೆಸಿ 7 ಜನರನ್ನು ಬಂಧಿಸಿ, 41,000 ರೂ. ಜಪ್ತಿದ್ದಾರೆ.
ಸಂತೆ ಬಜಾರ್ಗೆ ಹೊಂದಿಕೊಂಡಿರುವ ತಿರುಮಲ ಪ್ರಾವಿಜನ್ ಸ್ಟೋರ್ ಬಳಿ ಇಸ್ಫೀಟ್ ಆಡ್ತಿರುವ ಖಚಿತ ಮಾಹಿತಿ ಮೇರೆಗೆ ಪ್ರಭಾರಿ ಪಿಎಸ್‌ಐ ಹೀರಪ್ಪ ನಾಯಕ್ ನೇತೃತ್ವದಲ್ಲಿ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಹೊಳೆಯಪ್ಪ ಗುರಿಕಾರ, ಅಮರೇಶ ಮಂಗಳೂರು, ಸುಭಾಸ ತಲೆಖಾನ್, ಬಸವರಾಜ್ ಗೆಜ್ಜಲಗಟ್ಟಿ, ಶಿವಾನಂದ ಹೊಸಮನಿ, ರಮೇಶ ಮಾಲಿಪಾಟೀಲ್ ಎಂಬುವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.