ETV Bharat / state

ಕೊಪ್ಪಳ: ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 267 ಮಂದಿ ಪತ್ತೆ..! - ಕೊಪ್ಪಳ ಕೊರೊನಾ ಸೋಂಕಿತರು

ಮಂಗಳವಾರ ಕೊಪ್ಪಳ ಜಿಲ್ಲೆಯಲ್ಲಿ ಪತ್ತೆಯಾದ 6 ಕೊರೊನಾ ಸೋಂಕಿತರ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಒಟ್ಟು 267 ಜನರನ್ನು ಜಿಲ್ಲಾಡಳಿತ ಪತ್ತೆ ಮಾಡಿದೆ.

Koppal
Koppal
author img

By

Published : Jun 10, 2020, 8:04 PM IST

ಕೊಪ್ಪಳ: ನಿನ್ನೆ ಜಿಲ್ಲೆಯಲ್ಲಿ ಪತ್ತೆಯಾದ 6 ಜನ ಕೊರೊನಾ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ 89 ಜನ ಹಾಗೂ 178 ಜನ ದ್ವಿತೀಯ ಸಂಪರ್ಕಿತರನ್ನು ಸೇರಿ ಒಟ್ಟು 267 ಜನರನ್ನು ಕೊಪ್ಪಳ ಜಿಲ್ಲಾಡಳಿತ ಪತ್ತೆ ಹಚ್ಚಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಡಳಿತ, 23 ವರ್ಷದ ಮಹಿಳೆ ಪಿ-5835 ರಿಂದ ಒಟ್ಟು 141 ಜನರು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಕಾರಟಗಿ ತಾಲೂಕಿನ ತಿಮ್ಮಾಪುರದಲ್ಲಿ 19 ಜನ ಪ್ರಾಥಮಿಕ ಸಂಪರ್ಕಿತರು, 25 ಜನ ದ್ವಿತೀಯ ಸಂಪರ್ಕಿತರು ಹಾಗೂ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ 32 ಜನ ಪ್ರಾಥಮಿಕ ಸಂಪರ್ಕಿತರು, 65 ಜನ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಇನ್ನು ಪಿ-5833 ಜೊತೆ 5 ಜನ ಪ್ರಾಥಮಿಕ ಹಾಗೂ 7 ಜನ ದ್ವಿತೀಯ ಸಂಪರ್ಕಿತರು ಸೇರಿ 12 ಜನ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಪಿ-5834 ಜೊತೆ ಸಂಪರ್ಕಿತರಾದ 12 ಜನ ಪ್ರಾಥಮಿಕ ಸಂಪರ್ಕಿತರು, 6 ಜನ ದ್ವಿತೀಯ ಸಂಪರ್ಕಿತರು ಸೇರಿ 18 ಜನ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಪಿ-5836 ಜೊತೆ ಸಂಪರ್ಕಿತರಾದ 9 ಜನ ಪ್ರಾಥಮಿಕ ಹಾಗೂ 55 ಜನ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಪಿ-5837 ಜೊತೆ ಸಂಪರ್ಕಿತರಾದ 10 ಜನ ಪ್ರಾಥಮಿಕ, 16 ಜನ ದ್ವಿತೀಯ ಸಂಪರ್ಕಿತರು, ಪಿ-5838 ನಿಂದ ಸಂಪರ್ಕಿತರಾದ 2 ಪ್ರಾಥಮಿಕ ಹಾಗೂ ನಾಲ್ವರು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇನ್ನು 6 ಜನ ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿರುವವರಲ್ಲಿ ಆರೋಗ್ಯ ಸಿಬ್ಬಂದಿ, ದಿನಗೂಲಿಗಳು, ಕ್ಷೌರಿಕ, ವಿದ್ಯಾರ್ಥಿಗಳು, ಗಾರೆ ಕೆಲಸಗಾರರು, ಕೃಷಿಕರು, ಮಕ್ಕಳು, ನರೇಗಾ ಕೂಲಿಕಾರರು ಹಾಗೂ ಇನ್ನಿತರರು ಸೇರಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.