ಗಂಗಾವತಿ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್ಗೆ ತೆರಳಿದ್ದ ಖಲೀಲುಲ್ಲಾ ಖಾದ್ರಿ ದರ್ಗಾದ ಸೈಯದ್ ಷಾ ಖಲಿಲುಲ್ಲಾ ಖಾದ್ರಿ (45) ನಿಧನರಾಗಿದ್ದಾರೆ.
ಹೈದರಾಬಾದ್ನ ಜಾಮಿಯಾ ನಿಜಾಮಿಯಾ ಉಸರ್-ಎ-ಷರೀಫಾದಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದರು. ಗಂಧದ ಮೆರವಣಿಗೆಯ ವೇಳೆ ಹೃದಯಾಘಾತವಾಗಿದ್ದರಿಂದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಗರಕ್ಕೆ ಪಾರ್ಥಿವ ಶರೀರ ತರಲಾಗಿದ್ದು, ಹಿಂಬಾಲಕರನ್ನು ಹೊಂದಿದ್ದರು. ಹೈದರಾಬಾದ್ನ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಅರಬಿ ವಿಷಯದಲ್ಲಿನ ಉನ್ನತ ವ್ಯಾಸಂಗಕ್ಕಾಗಿ 1998ರಲ್ಲಿ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದರು.