ಕೊಪ್ಪಳನ: ತಾಲೂಕಿನ ಅಗಳಕೇರಾ ಗ್ರಾಮದ ಬಳಿ ಇರುವ ತುಂಗಭದ್ರಾ ಎಡದಂಡೆ ಮುಖ್ಯನಾಲೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ಅಗಳಕೇರಾ ಬಳಿಯ ಕೆರೆಹಳ್ಳಿ ಬ್ರಿಡ್ಜ್ ಬಳಿಯಿಂದ ಅಂದಿಗಾಲೇಶ್ವರ ದೇವಸ್ಥಾನದ ಬಳಿವರೆಗಿನ ನಾಲೆಯಲ್ಲಿ ಸತ್ತ ಮೀನುಗಳು ಪತ್ತೆಯಾಗಿವೆ.
ನಾಲೆಯಲ್ಲಿ ಸಾಕಷ್ಟು ದಿನಗಳಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಹೀಗೆ ಸತ್ತು ತೇಲುತ್ತಿರುವ ಮೀನುಗಳನ್ನು ಕಂಡ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮೀನು ಯಾವ ಕಾರಣಕ್ಕೆ ಸಾವನ್ನಪ್ಪಿವೆ ಎಂಬುದು ತಿಳಿದು ಬಂದಿಲ್ಲ. ಸತ್ತ ಮೀನುಗಳು ಈಗ ಸಣ್ಣದಾಗಿ ಹರಿಯುತ್ತಿರುವ ನೀರಿನ ಮೂಲಕ ತೇಲಿ ಬಂದಿವೆಯಾ ಎಂಬುದು ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಗೊಂದಲಕ್ಕೊಳಗಾಗಿದ್ದಾರೆ.