ಕೊಪ್ಪಳ : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿರುವ ಜಿಲ್ಲೆಯ ಮಕ್ಕಳಿಗೆ ಆತ್ಮಸ್ಥೈರ್ಯ ಹಾಗೂ ಮಕ್ಕಳ ಪಾಲಕರಿಗೆ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ತಯಾರಿಸಿದ ಕಿರುಚಿತ್ರ ಆದ್ಭುತವಾಗಿ ಮೂಡಿ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ತಿಳಿಸಿದರು.
ಈ ಕುರಿತಂತೆ ಮಾಹಿತಿ ನೀಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಈಗಾಗಲೇ ನಿರ್ಧಾರ ಮಾಡಿರುವುದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಕಿರುಚಿತ್ರದ ಮೂಲಕ ಪ್ರಯತ್ನ ಮಾಡಿಲಾಗಿದ್ದು ಈ ಕಿರುಚಿತ್ರದಿಂದ ಮಕ್ಕಳಲ್ಲಿ ಕಾನ್ಫಿಡೆನ್ಸ್ ಮೂಡುತ್ತಿದೆ ಎಂದರು.
ಕೊರೊನಾದಂತಹ ಭೀತಿಯ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಎಕ್ಸಾಂ ಬರೆಯಲಿರುವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವುದು ಅನಿವಾರ್ಯವಾಗಿತ್ತು. ಪರೀಕ್ಷಾ ದಿನದ ದಿನಚರಿ ಹೇಗಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಯಾವ ಯಾವ ನಿಯಮಗಳನ್ನು ಅನುಸರಿಸಬೇಕು. ಹಾಗೂ ಪರೀಕ್ಷಾ ಕೇಂದ್ರದಲ್ಲಿನ ವ್ಯವಸ್ಥೆ ಹೇಗಿರುತ್ತದೆ ಎಂಬುದರ ಬಗ್ಗೆ ಮಕ್ಕಳಿಗೆ ಮತ್ತು ಪಾಲಕರಿಗೆ ತಿಳಿಸಬೇಕಾಗಿತ್ತು. ಕಿರುಚಿತ್ರದ ಮೂಲಕ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲಾಗುತ್ತಿದೆ ಎಂದರು.
ಈಗಾಗಲೆ ಕಿರುಚಿತ್ರ ನೋಡಿರುವ ಶಿಕ್ಷಣ ಸಚಿವರು, ಮಕ್ಕಳು ಹಾಗೂ ಪಾಲಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ