ETV Bharat / state

ಗಂಗಾವತಿ: ರಸ್ತೆಗೆ ವಾಲಿರುವ ವಿದ್ಯುತ್ ಲೈನ್.. ಭಯದಲ್ಲೇ ಸಂಚಾರ

author img

By

Published : Aug 28, 2020, 11:18 PM IST

ಕಲ್ಗುಡಿ- ಹೊಸ್ಕೇರಾ ಗ್ರಾಮದ ಮಧ್ಯೆ ಇರುವ ನರಿಹಳ್ಳದ ಸಮೀಪ ವಿದ್ಯುತ್ ಕಂಬ ವಾಲಿದೆ. 11 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಪೂರೈಸುತ್ತಿರುವ ಈ ಲೈನ್ ಆಕಸ್ಮಿಕವಾಗಿ ರಸ್ತೆಯ ಮೇಲೆ ಬಿದ್ದರೆ, ಎರಡು ಬದಿಯಲ್ಲಿನ ಸುಮಾರು ನೂರು ಮೀಟರ್ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬಗಳು ರಸ್ತೆ ಅಥವಾ ಹೊಲದ ಮೇಲೆ ಬೀಳಲಿದೆ.

Current line problem
Current line problem

ಗಂಗಾವತಿ: ಈಗಾಗಲೇ ಶೇ 60ರಷ್ಟು ರಸ್ತೆಗೆ ವಾಲಿರುವ ವಿದ್ಯುತ್ ಲೈನ್, ಯಾವುದೇ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ಬಿದ್ದು ತೊಂದರೆ ಸೃಷ್ಟಿಸಬಹುದು ಎನ್ನುವ ದೃಶ್ಯ ತಾಲೂಕಿನ ಜಂಗಮರ ಕಲ್ಗುಡಿ ಸಮೀಪ ಕಂಡು ಬಂದಿದೆ.

ಜಂಗಮರ ಕಲ್ಗುಡಿಯಿಂದ ಹೊಸಕೇರಾ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಕಳೆದ ಮೂರು-ನಾಲ್ಕು ತಿಂಗಳಿಂದ ಉಭಯ ಗ್ರಾಮಗಳ ಜನರು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರಾದ ರಾಮಣ್ಣ, ಪರಶುರಾಮ, ದುರುಗಪ್ಪ ಆಗೋಲಿ, ಹೊಸಕೇರಿ ಗ್ರಾಮದ ನಾಗರಿಕ ಸೋಮನಾಥ ದೂರಿದ್ದಾರೆ.

ಕಲ್ಗುಡಿ- ಹೊಸ್ಕೇರಾ ಗ್ರಾಮದ ಮಧ್ಯೆ ಇರುವ ನರಿಹಳ್ಳದ ಸಮೀಪ ವಿದ್ಯುತ್ ಕಂಬ ವಾಲಿದೆ. 11 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಪೂರೈಸುತ್ತಿರುವ ಈ ಲೈನ್ ಆಕಸ್ಮಿಕವಾಗಿ ರಸ್ತೆಯ ಮೇಲೆ ಬಿದ್ದರೆ, ಎರಡು ಬದಿಯಲ್ಲಿನ ಸುಮಾರು ನೂರು ಮೀಟರ್ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬಗಳು ರಸ್ತೆ ಅಥವಾ ಹೊಲದ ಮೇಲೆ ಬೀಳಲಿದೆ. ಇದರಿಂದ ನಿತ್ಯ ಕೃಷಿ ಕಾಯಕದಲ್ಲಿ ತೊಡಗಿರುವ ರೈತರು ಹಾಗೂ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ನೂರಾರು ಪ್ರಯಾಣಿಕರ ಮೇಲೆ ಅಗಾಧ ಪರಿಣಾಮ ಬೀರಲಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಮುಂದೆ ಸಂಭವಿಸಬಹುದಾದ ಸಮಸ್ಯೆಯನ್ನು ತಡೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.