ಕುಷ್ಟಗಿ (ಕೊಪ್ಪಳ): ತಾಲೂಕಿನ ಚಳಗೇರಾ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದ್ದು, ಗ್ರಾಮದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಹಾಗೆಯೇ ಸ್ಥಳೀಯ ಗ್ರಾಮ ಪಂಚಾಯಿತಿ ಶುಕ್ರವಾರದ ಸಂತೆಯನ್ನು ರದ್ದುಗೊಳಿಸಿದೆ.
ಚಳಗೇರಾ ಮೂಲದ ಬೆಂಗಳೂರಿನ ಯಶವಂತಪುರದಲ್ಲಿ ವಾಸವಾಗಿದ್ದ. ಇತ್ತೀಚೆಗೆ ಆತ ಸ್ವಗ್ರಾಮಕ್ಕೆ ಬಂದಿದ್ದ. ಹೀಗಾಗಿ, ಆತನ ಗಂಟಲು ದ್ರವ ಪಡೆದು ಲ್ಯಾಬ್ಗೆ ಕಳುಹಿಸಲಾಗಿತ್ತು. ಗುರುವಾರ ರಾತ್ರಿ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಕೊಪ್ಪಳ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವೈದ್ಯಾಧಿಕಾರಿ ಡಾ.ಶರಣು ಮೂಲಿಮನಿ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸೋಂಕಿತ ಮನೆಯ ಸುತ್ತಮುತ್ತ ಪ್ರದೇಶವನ್ನು ಕಂಟೈನ್ಮೆಂಟ್ ವಲಯ (ನಿರ್ಬಂಧಿತ ವಲಯ) ಎಂದು ಘೋಷಿಸಲಾಗಿದೆ.
ಸೋಂಕು ನಿವಾರಕ ಔಷಧಿ ಸಿಂಪಡಿಸುವ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳ ಸೀಲಡೌನ್ಗೆ ಕ್ರಮ ಕೈಗೊಂಡಿದ್ದೇವೆ ಎಂದು ಗ್ರಾ.ಪಂ.ಪಿಡಿಒ ಬಸವರಾಜ ಸಂಕನಾಳ ಈಟಿವಿ ಭಾರತಕ್ಕೆ ತಿಳಿಸಿದರು.