ಗಂಗಾವತಿ: ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯ ಮನೋಹರಸ್ವಾಮಿ ಅವರ ಅಪಹರಣ ಪ್ರಕರಣದಲ್ಲಿನ ಇತರೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಿಯೋಗ ಪೊಲೀಸರನ್ನು ಒತ್ತಾಯಿಸಿ ಮನವಿ ಸಲ್ಲಿಸಿತು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಾಮೀದ ಮನಿಯಾರ ಹಾಗೂ ಕೆಪಿಸಿಸಿಯ ಫ್ಯಾನಾಲಿಸ್ಟ್ ಶೈಲಾಜಾ ಹಿರೇಮಠ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಗೆ ತೆರಳಿದ ಕೈ ಕಾರ್ಯಕರ್ತರು ಹಾಗೂ ಮುಖಂಡರ ನಿಯೋಗ, ಪಿಐ ವೆಂಕಟಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
ಚುನಾಯಿತ ಪ್ರತಿನಿಧಿಗಳನ್ನು ಅಪಹರಣ ಮಾಡುವಂತ ಕೀಳುಮಟ್ಟಕ್ಕೆ ಗಂಗಾವತಿ ರಾಜಕೀಯ ಇಳಿದಿದೆ. ಅಧಿಕಾರಕ್ಕಾಗಿ ಎಂತಹ ಮಟ್ಟಕ್ಕಾದರೂ ಇಳಿಯುತ್ತೇವೆ ಎಂದು ಈ ಮೂಲಕ ಬಿಜೆಪಿಗರು ಸಾಬೀತು ಮಾಡಿದ್ದಾರೆ. ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಚುನಾಯತ ಪ್ರತಿನಿಧಿಗಳನ್ನು ಅಪಹರಣ ಮಾಡುವಂತ ಕೆಲಸಕ್ಕೆ ಕೈಹಾಕುವ ಮೂಲಕ ಬಿಜೆಪಿ, ಜನಸಾಮಾನ್ಯರಲ್ಲಿ ಭೀತಿ ಉಂಟು ಮಾಡಿದೆ. ಇದಕ್ಕೆ ಕಡಿವಾಣ ಬೀಳಬೇಕಾದರೆ ಆರೋಪಿಗಳು ಜೈಲು ಸೇರಿ ಕಂಬಿ ಎಣಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.