ETV Bharat / state

ತಾರತಮ್ಯ ಆರೋಪ: ತಹಶೀಲ್ದಾರ್​​​ ವಾಹನಕ್ಕೆ ಘೇರಾವ್ ಹಾಕಿ ಆಕ್ರೋಶ

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಮರಕುಂಬಿಯ ಪ್ರಕರಣದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ರದ್ದು ಮಾಡಲು ಆಗದು. ಮತಗಟ್ಟೆಯ ಚುನಾವಣಾಧಿಕಾರಿಗೆ ನೀವು ದೂರು ನೀಡಿದ್ದು, ಅವರು ನಮ್ಮ ಗಮನಕ್ಕೆ ತರಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ. ಅದು ಅಧಿಕಾರಿಯ ತಪ್ಪು. ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗುವಂತೆ ತಿಳಿಸಿದರು.

congress-activists-did-gherao-to-gangavati-tehsildar-vehicle
ಗಂಗಾವತಿ ತಹಶೀಲ್ದಾರ್​
author img

By

Published : Dec 18, 2020, 7:36 PM IST

ಗಂಗಾವತಿ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರ ಜಾತಿ ಮತ್ತು ಆದಾಯ ಪ್ರಮಾಣಪತ್ರ ರದ್ದು ಮಾಡಿ, ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಸ್ಪರ್ಧೆಗೆ ತಹಶೀಲ್ದಾರ್​ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಯ ವಾಹನಕ್ಕೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಗೆ ತೆರಳಿದ ಗಂಗಾವತಿ ತಾಲೂಕು ಜಂಗಮರ ಕಲ್ಗುಡಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು, ತಹಶೀಲ್ದಾರ್ ರದ್ದು ಮಾಡಿದ ಜಾತಿ ಮತ್ತು ಆದಾಯ ಪ್ರಮಾಣಪತ್ರದಿಂದಾಗಿ ಚುನಾವಣೆಯಿಂದ ಹಿಂದಕ್ಕೆ ಸರಿದ ವಿ.ಪ್ರಸಾದ್ ಹಾಗೂ ಮರಕುಂಬಿಯ ಅಭ್ಯರ್ಥಿ ಪರ ಚನ್ನವೀರಯ್ಯ ಸ್ವಾಮಿ ನೇತೃತ್ವದಲ್ಲಿ ಅಧಿಕಾರಿಯ ವಾಹನಕ್ಕೆ ಘೇರಾವ್ ಹಾಕಲಾಯಿತು.

ಗಂಗಾವತಿ ತಹಶೀಲ್ದಾರ್​​ ವಾಹನಕ್ಕೆ ಘೇರಾವ್ ಹಾಕಿದ ಕಾಂಗ್ರೆಸ್​ ಕಾರ್ಯಕರ್ತರು

ಜಂಗಮರ ಕಲ್ಗುಡಿ ಗ್ರಾಮದಲ್ಲಿನ ಪ್ರಕರಣದಂತೆ ಮತ್ತೊಂದು ಪ್ರಕರಣ ತಾಲೂಕಿನ ಕೇಸರಹಟ್ಟಿ ಪಂಚಾಯಿತಿಯ ಮರಕುಂಬಿಯಲ್ಲಿ ನಡೆದಿದೆ. ಆದರೆ ಅಲ್ಲಿನ ಅಭ್ಯರ್ಥಿಯ ರಾಜಕೀಯ ಒತ್ತಡಕ್ಕೆ ಮಣಿದು ತಹಶೀಲ್ದಾರ್ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ ಕೈ ಕಾರ್ಯಕರ್ತರು, ಕಲ್ಗುಡಿ ಪ್ರಕರಣದಲ್ಲಿ ಜಾತಿ ಪ್ರಮಾಣಪತ್ರ ರದ್ದು ಮಾಡಿದ್ದಾರೆ ಎಂದು ದೂರಿದರು.

ಚುನಾವಣೆ ವಂಚಿತ ಅಭ್ಯರ್ಥಿ ಪ್ರಸಾದ್ ಮಾತನಾಡಿ, ಚುನಾವಣಾ ಆಯೋಗದ ಪ್ರಕಾರ ವ್ಯಕ್ತಿ ಆದಾಯ ತೆರಿಗೆದಾರ ಹಾಗೂ ದೊಡ್ಡ ಕೃಷಿಕನಾಗಿರಬಾರದು ಎಂದಿದೆ. ಈ ಪ್ರಕರಣದಡಿ ನನ್ನ ಪ್ರಮಾಣಪತ್ರ ರದ್ದು ಮಾಡಿದ್ದಾರೆ. ಮರಕುಂಬಿ ಪ್ರಕರಣದಲ್ಲಿನ ವ್ಯಕ್ತಿಯ ಪ್ರಮಾಣಪತ್ರ ರದ್ದು ಮಾಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.