ETV Bharat / state

'ಡಾಕ್ಟ್ರೆ ನಿಮ್ಮನ್ನು, ಕುಟುಂಬಸ್ಥರನ್ನು ಸರ್ವ ನಾಶ ಮಾಡ್ತೀನಿ'- ಎಂದವನ ವಿರುದ್ಧ ದೂರು ದಾಖಲು - threat on doctors

ವ್ಯಕ್ತಿಯೋರ್ವನ ತಾಯಿ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಪರಿಣಾಮ ವೈದ್ಯರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಆರೋಪಿ ವಿರುದ್ಧ ದೂರು ದಾಖಲಾಗಿದೆ.

Complaint against who put threat on doctors
'ಡಾಕ್ಟ್ರೆ ನಿಮ್ಮನ್ನು, ಕುಟುಂಬಸ್ಥರನ್ನು ಸರ್ವ ನಾಶ ಮಾಡ್ತೀನಿ'- ಎಂದವನ ವಿರುದ್ಧ ದೂರು ದಾಖಲು
author img

By

Published : Jun 9, 2021, 2:25 PM IST

ಗಂಗಾವತಿ: ಡಾಕ್ಟ್ರೆ ನಿಮ್ಮನ್ನು, ನಿಮ್ಮ ಕುಟುಂಬದ ಸದಸ್ಯರನ್ನು ಸರ್ವ ನಾಶ ಮಾಡ್ತೀನಿ ಹುಷಾರ್ ಎಂದು ವ್ಯಕ್ತಿಯೊಬ್ಬ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ವೈದ್ಯರಿಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ನಗರದ ಸೈಯದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಆಸ್ಪತ್ರೆಯ ಅರವಳಿಕೆ ತಜ್ಞ ರೇಣುಕಾರಾಧ್ಯ ಹಿರೇಮಠ ಎಂಬುವರು ಇಲ್ಲಿನ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Complaint against who put threat on doctors
ಜೀವ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

ನಗರದ ಸೈಯದ್ ಇಸ್ಮಾಯಿಲ್ ಎಂಬ ವ್ಯಕ್ತಿ ತನ್ನ ತಾಯಿ (ಸೋಂಕಿತೆ) ಖಾಜಾಬನಿ ಎಂಬುವವರನ್ನು ಆನೆಗೊಂದಿ ರಸ್ತೆಯಲ್ಲಿನ ಎಂಸಿಎಚ್ ಆಸ್ಪತ್ರೆಗೆ ಮೇ 11ರಂದು ದಾಖಲಿಸಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆ ಆಕೆಯನ್ನು ಮೇ 19ರಂದು ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತ ಮಹಿಳೆ ಸಾವನ್ನಪ್ಪಿದ್ದಳು.

ಪುತ್ರ ಸೈಯದ್ ಇಸ್ಮಾಯಿಲ್, ಜೂ. 5ರಂದು ರಾತ್ರಿ ಹನ್ನೊಂದರ ಸುಮಾರಿಗೆ ವೈದ್ಯರಿಗೆ ಕರೆ ಮಾಡಿದ್ದಾನೆ. ನಿಮ್ಮ ನಿರ್ಲಕ್ಷ್ಯದಿಂದಾಗಿ ತನ್ನ ತಾಯಿ ಸಾವನ್ನಪ್ಪಿದ್ದು, ನಿಮ್ಮನ್ನು, ನಿಮ್ಮ ಕುಟುಂಬಸ್ಥರು ಹಾಗೂ ನೋಡಲ್ ಅಧಿಕಾರಿ ಡಾ. ಸಲಾವುದ್ದೀನ್ ಅವರನ್ನು ಹಾಗೂ ಅವರ ಇಡೀ ಕುಟುಂಬದ ಸದಸ್ಯರನ್ನು ಕೊಲೆ‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಕೋವಿಡ್ ಲಸಿಕೆ

ಕರ್ನಾಟಕ ಎಪಿಡಮಿಕ್ ಡಿಸೀಸ್ ಆ್ಯಕ್ಟ್ 2020 ಹಾಗೂ ಪ್ರೊಹಿಬಿಷನ್‌ ಆಫ್ ವೈಲೆನ್ಸ್ ಅಗೆನೆಸ್ಟ್ ಮೆಡಿಕಲ್ ಸರ್ವೀಸ್, ಪರ್ಸನಲ್ ಅಂಡ್ ಡ್ಯಾಮೇಜ್ ಆಫ್​​ ಪ್ರಾಪರ್ಟಿ ಇನ್ ಮೆಡಿಕಲ್ ಸರ್ವೀಸ್ ಆ್ಯಕ್ಟ್ 2009 ಕಾಯ್ದೆಯಡಿ ಆರೋಪಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.