ETV Bharat / state

ಕುಡಿತ ಬಿಡುವಂತೆ ಪೋಷಕರಿಂದ ಬುದ್ಧಿವಾದ : ಮನನೊಂದು ವ್ಯಕ್ತಿ ಆತ್ಮಹತ್ಯೆ - committed suicide

ಹಬ್ಬದ ಸಮಯದಲ್ಲಿ ಕುಡಿಯಬೇಡ ಎಂದು ಮನೆಯವರು ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

committed-suicide
ಮನನೊಂದು ಆತ್ಮಹತ್ಯೆ
author img

By

Published : Aug 3, 2022, 4:06 PM IST

Updated : Aug 3, 2022, 4:48 PM IST

ಕುಷ್ಟಗಿ (ಕೊಪ್ಪಳ): ಮೊಹರಂ ಹಬ್ಬದ ಸಂದರ್ಭದಲ್ಲಾದರೂ ಕುಡಿಯೋದು ಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಷ್ಟಗಿಯ ಅಡವಿರಾಯ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ 13ನೇ ವಾರ್ಡ್​ ನಿವಾಸಿ ಹಬೀಬ್ ಅಬ್ದುಲ್ ಗಣಿಸಾಬ್ ಕನಕಾಪೂರ (35) ಮೃತ ವ್ಯಕ್ತಿ.

ಮದ್ಯ ವ್ಯಸನಿಯಾಗಿದ್ದ ಹಬೀಬ್ ಮುದಗಲ್​ನಲ್ಲಿದ್ದ. ಇತ್ತೀಚೆಗೆ ಕುಷ್ಟಗಿಗೆ ಬಂದಿದ್ದ ವೇಳೆ ಪಾಲಕರು ಕುಡಿತದ ಚಟ ಬಿಡುವಂತೆ ಬುದ್ಧಿ ಹೇಳಿದ್ದರಂತೆ. ಆದರೂ ತಂದೆಯಿಂದ 100 ರೂ. ಪಡೆದು ಹೋಗಿದ್ದ. ಬುಧವಾರ ಬೆಳಗ್ಗೆ ಕುಷ್ಟಗಿ ಪಟ್ಟಣದ ಶಾಖಾಪೂರ ರಸ್ತೆಯ ಅಡವಿರಾಯ ಕಾಲೋನಿಯ ನೋಬಲ್ ಕಾನ್ವೆಂಟ್ ಸ್ಕೂಲ್ ಹಿಂಭಾಗ ನಿರ್ಮಾಣ ಹಂತದ ಮನೆಯಲ್ಲಿ ಈ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ಪಿಎಸ್​ಐ ಮೌನೇಶ ರಾಠೋಡ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅವರ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಮೃತನಿಗೆ ಮದುವೆಯಾಗಿದ್ದು ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚೆಸ್ ಒಲಿಂಪಿಯಾಡ್​​ ಭದ್ರತೆಯಲ್ಲಿದ್ದ ಪೊಲೀಸ್​ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Last Updated : Aug 3, 2022, 4:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.