ಗಂಗಾವತಿ(ಕೊಪ್ಪಳ): ಮಾರುಕಟ್ಟೆಯಲ್ಲಿ ಹೇಗೆಲ್ಲಾ ವ್ಯಾಪಾರ ವಹಿವಾಟು ನಡೆಯುತತದೆ, ಸರಕು ಸರಂಜಾಮುಗಳನ್ನು ಹೇಗೆಲ್ಲಾ ವಿಕ್ರಯ ನಡೆಯುತ್ತದೆ. ಕೊಡು-ಕೊಂಡುಕೊಳ್ಳುವಿಕೆ ಹೇಗೆಲ್ಲಾ ನಡೆಯುತ್ತದೆ ಎಂಬ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳುವ ಉದ್ದೇಶದಿಂದ ಸ್ವತಃ ಶಾಲೆಯ ಮಕ್ಕಳು ತರಕಾರಿ ಖರೀದಿ ಮಾಡಿದರು.
ನಗರದ ಮಹಾನ್ ಕಿಡ್ಸ್ ಶಾಲೆಯ ಒಂದರಿಂದ ಎಂಟನೆ ತರಗತಿ ಮಕ್ಕಳು, ಇಲ್ಲಿನ ಮಾರುಕಟ್ಟೆಗೆ ಕೈಚೀಲ ಹಿಡಿದು ತರಕಾರಿ ಕೊಳ್ಳಲು ಮುಂದಾದರು. ವಿವಿಧ ತರಕಾರಿಗಳ ಬೆಲೆ ಕೇಳಿ ಚೌಕಾಶಿ ಮಾಡಿ ಖರೀದಿ ಮಾಡಿದರು. ಮಕ್ಕಳಿಗೆ ಪಾಲಕರು ಹಾಗೂ ಶಾಲೆಯ ಶಿಕ್ಷಕರು ಸಾಥ್ ನೀಡಿದರು.
ಮಕ್ಕಳಿಗೆ ಶಾಲೆಯಲ್ಲಿ ಸೈದ್ಧಾಂತಿಕ ಪಾಠ ಹೇಳಿದರೂ ಪ್ರಾಯೋಗಿಕ ತರಬೇತಿಯಷ್ಟು ಪರಿಣಾಮಕಾರಿಯಲ್ಲ. ಹೀಗಾಗಿ ನೇರವಾಗಿ ಮಾರುಕಟ್ಟೆಗೆ ಕಳಿಸುವ ಮೂಲಕ ಅವರಲ್ಲಿ ಜೀವನ ಕೌಶಲಗಳನ್ನು ಕಲಿಸುವ ಕೆಲಸ ಮಾಡಲಾಗಿದೆ' ಎಂದು ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ ನೇತ್ರಾಜ್ ಗುರುವಿನ ಮಠ ಹೇಳಿದರು.
ಇದನ್ನೂ ಓದಿ:ಹಾವೇರಿ: ಆದಾಯದ ಕೊರತೆ ಇದ್ದರೂ ಈಜುಕೊಳ ನಡೆಸುತ್ತಿರುವ ಗುತ್ತಿಗೆದಾರರು